ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ 5 ದಿನಗಳವರೆಗೆ ನಡೆಯುವ 15ನೇ ಬೆಂಗಳೂರು ಏರ್ ಶೋನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗವಹಿಸಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಎಎಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಸಚಿವರು, ಆತ್ಯಾಧುನಿಕ ರಕ್ಷಣಾ ತಂತ್ರಜ್ಞಾನ ಹಾಗೂ ಜಾಗತಿಕ ವಾಯುಯಾನ ಕ್ಷೇತ್ರದ ಶ್ರೇಷ್ಠತಗೆ ಈ ಬಾರಿಯ ಬೆಂಗಳೂರು ʼಏರೋ ಇಂಡಿಯಾ-2025ʼ ʼಏರ್ ಶೋʼ ಸಾಕ್ಷಿಯಾಗಲಿದೆ ಎಂದು ಹೇಳಿದರು.
ಯಲಹಂಕದ ವಾಯುನೆಲೆಯಲ್ಲಿ ಫೆ.10 ರಿಂದ ಫೆ.14ರವರೆಗೆ ʼಏರೋ ಇಂಡಿಯಾ-2025ʼ ವೈಮಾನಿಕ ಪ್ರದರ್ಶನ ನಡೆಯಲಿದೆ.





