Mysore
25
overcast clouds

Social Media

ಬುಧವಾರ, 25 ಫೆಬ್ರವರಿ 2026
Light
Dark

ನಟ ಶಿವರಾಜ್‌ ಕುಮಾರ್‌ ಅಮೆರಿಕಾ ಪ್ರವಾಸಕ್ಕೆ ಡೇಟ್‌ ಫಿಕ್ಸ್‌

ಬೆಂಗಳೂರು: ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅಮೆರಿಕಾಗೆ ತೆರಳುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇದೀಗ ಅಮೇರಿಕಾಗೆ ತೆರಳುವ ದಿನಾಂಕ ನಿಗದಿಯಾಗಿದ್ದು, ಶಸ್ತ್ರಚಿಕಿತ್ಸೆಗೂ ಡೇಟ್‌ ಫಿಕ್ಸ್‌ ಆಗಿದೆ.

ನಟ ಶಿವರಾಜ್‌ ಕುಮಾರ್‌ ಅವರಿಗೆ ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಅಮೇರಿಕಾಗೆ ತೆರಳುತ್ತಿದ್ದು, ಸರ್ಜರಿಗೆ ಒಳಗಾಗಲಿದ್ದಾರೆ.

ಇದೇ ಡಿಸೆಂಬರ್.18ರಂದು ಶಿವರಾಜ್‌ ಕುಮಾರ್‌ ಅಮೇರಿಕಾಗೆ ತೆರಳುತ್ತಿದ್ದಾರೆ.

ಅಮೆರಿಕಾದ ಫ್ಲೋರಿಡಾದಲ್ಲಿರುವ ಮಿಯಾಮಿಯಲ್ಲಿ ಡಿಸೆಂಬರ್.‌24ರಂದು ಶಿವರಾಜ್‌ ಕುಮಾರ್‌ಗೆ ಸರ್ಜರಿ ನಡೆಯಲಿದೆ.

ಸರ್ಜರಿ ಆದ ಬಳಿಕವು ನಟ ಶಿವರಾಜ್‌ ಕುಮಾರ್‌ ಅವರು ಅಲ್ಲೇ ಕೆಲ ತಿಂಗಳು ವಿಶ್ರಾಂತಿ ಪಡೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Tags:
error: Content is protected !!