ಬೆಂಗಳೂರು: ಕೊಲೆಯಾದ ರೇಣುಕಾಸ್ವಾಮಿಗೆ ನ್ಯಾಯ ಸಿಗಲಿ ಎಂದಿದ್ದಕ್ಕೆ ನಟ ದರ್ಶನ್ ಅಭಿಮಾನಿಗಳು ಅಶ್ಲೀಲ ಕಮೆಂಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ನಟ ಶಿವರಾಜ್ ಕುಮಾರ್ ಅವರು ರಮ್ಯಾ ಪರ ನಿಂತಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು, ನಟಿ ರಮ್ಯಾ ನಿಲುವು ಸರಿಯಾಗಿದೆ. ರಮ್ಯಾ ಜೊತೆ ನಾವು ಸದಾ ನಿಲ್ಲುತ್ತೇವೆ. ನಟಿ ರಮ್ಯಾ ವಿರುದ್ಧ ಬಳಸಿದ ಪದ ಖಂಡನೀಯ. ಯಾವ ಮಹಿಳೆ ವಿರುದ್ಧವೂ ಮಾತನಾಡಿರುವುದು ಸರಿಯಲ್ಲ. ಈ ರೀತಿಯ ಹೇಳಿಕೆ ನೀಡಬಾರದು. ಸೋಷಿಯಲ್ ಮೀಡಿಯಾವನ್ನು ಏಳಿಗೆಗಾಗಿ ಬಳಸಿ ಎಂದು ಸಲಹೆ ನೀಡಿದ್ದಾರೆ.





