Mysore
19
clear sky

Social Media

ಬುಧವಾರ, 17 ಡಿಸೆಂಬರ್ 2025
Light
Dark

ಹಂಪಿ ಉತ್ಸವದಲ್ಲಿ ನಟ ದರ್ಶನ್‌ ಭಾಗಿ!

ಹೊಸಪೇಟೆ: ಶನಿವಾರ ಎರಡನೇ ದಿನ ಹಂಪಿ ಉತ್ಸವದ ಉದ್ಘಾಟನೆ ಕಾರ್ಯಕ್ರಮಕ್ಕೆ ಸಿನಿಮಾ ನಾಯಕ ನಟ ದರ್ಶನ್ ತೂಗುದೀಪ ಮೆರಗು ತಂದರು‌. ದರ್ಶನ್ ನೋಡಿದ ಜನಸ್ತೋಮ ‘ಡಿ ಬಾಸ್’ ಎಂದು ಕೂಗಿ ಸಂತಸ ವ್ಯಕ್ತಪಡಿಸಿದರು.

ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಜಯನಗರ ಜಿಲ್ಲಾ ಉಸ್ತುವಾರಿ ವಹಿಸಿಕೊಂಡು ಹಂಪಿ ಉತ್ಸವ ಆಯೋಜಿಸುವ ಸದಾವಕಾಶ ದೊರಕಿದೆ. ಇದರಿಂದ ಸಂತೋಷ ಹಾಗೂ ಖುಷಿ ಆಗುತ್ತಿದೆ ಎಂದರು.

ಸಿನಿಮಾ ನಾಯಕ ನಟ ದರ್ಶನ ಮಾತನಾಡಿ, 2018 ರಲ್ಲಿ ಹಂಪಿ ಉತ್ಸವಕ್ಕೆ ಆಗಮಿಸಿದ್ದೆ. 2024 ರಲ್ಲಿ ಮೊತ್ತೊಮ್ಮೆ ಆಗಮಿಸಿರುವುದು ಸುದೈವ. ಕನ್ನಡ ನಾಡಿನ ಚರಿತ್ರೆಯಲ್ಲಿ ಕೃಷ್ಣ ದೇವರಾಯ, ಸಂಗೊಳ್ಳಿ ರಾಯಣ್ಣ ಹಾಗೂ ಮದಕರಿ ನಾಯಕರ ಹೆಸರು ಎಂದಿಗೂ ಚಿರಸ್ಥಾಯಿಯಾಗಿದೆ.

ಕೃಷ್ಣದೇವರಾಯರು ನಮ್ಮೆಲ್ಲರಿಗೂ ಪ್ರೇರಣೆ. ಅವರ ಕಾರಣದಿಂದಲೇ ಇಂದು ನಾವೆಲ್ಲರೂ ಹಂಪಿಯಲ್ಲಿ ಉತ್ಸವ ಆಚರಿಸುತ್ತಿದ್ದೇವೆ. ಕೃಷ್ಣದೇವರಾಯರ ಆತ್ಮ ನಮ್ಮೆಲ್ಲರೊಂದಿಗಿದೆ ಎಂದರು.

ಸಚಿವ ಜಮೀರ್ ಅಹ್ಮದ್ ಒಳ್ಳೆಯ ವ್ಯಕ್ತಿ, ಯಾವುದೇ ಫಲಾಪೇಕ್ಷೆ ಇಲ್ಲದೆ ಬಡವರಿಗೆ ನೆರವು ನೀಡಿದ್ದಾರೆ. ಬಡ ಮಕ್ಕಳ ಶಿಕ್ಷಣ ಸಹಾಯ ಒದಗಿಸಿದ್ದಾರೆ. ಅವರ ಮೇಲಿನ ಅಭಿಮಾನದಿಂದ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ.

ಮೈಸೂರಿನ ದಸರಾ ಮಾದರಿಯಲ್ಲಿ ಹಂಪಿ ಉತ್ಸವವು ಜನ ಮನ ಸೂರೆಗೊಂಡಿದೆ. ಇದೇ ಮಾದರಿಯಲ್ಲಿ ಉತ್ತರ ಕರ್ನಾಟಕ ಭಾಗದ ಉತ್ಸವಗಳು ಪ್ರಸಿದ್ಧಿ ಗಳಿಸಲಿ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!