Mysore
28
few clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ನಟ ದರ್ಶನ್‌ ಜಾಮೀನು ರದ್ದು ಬಗ್ಗೆ ಸಚಿವ ಪರಮೇಶ್ವರ್‌ ಸ್ಫೋಟಕ ಹೇಳಿಕೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆನ್ನು ನೋವಿನ ಕಾರಣ ನೀಡಿ ನಟ ದರ್ಶನ್‌ ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಗಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ಜಿ.ಪರಮೇಶ್ವರ್‌ ಅವರು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್‌ ರಿಪೋರ್ಟ್‌ಗಾಗಿ ಹೈದಾರಾಬಾದ್‌ಗೆ ಮೊಬೈಲ್‌ ಕಳುಹಿಸಿದ್ದೆವು. ಕೊಲೆಯಾದ ಸ್ಥಳದಲ್ಲಿ ಆರೋಪಿ ದರ್ಶನ್‌ ಇದ್ದ ಫೋಟೋ ರಿಟ್ರೀವ್‌ ವೇಳೆ ಸಿಕ್ಕಿದೆ ಎಂದು ಹೇಳಿದರು.

ಯಾರೋ ಜೊತೆಯಲ್ಲಿದ್ದವನು ವಿಡಿಯೋ ಮಾಡಿಕೊಂಡಿದ್ದ. ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಜಾಮೀನು ರದ್ದು ಮಾಡಿಸಬೇಕು. ಮುಂದೆ ಏನು ಕ್ರಮ ಆಗಬೇಕು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.

ಇನ್ನು ದರ್ಶನ್‌ ಆಪರೇಷನ್‌ ಮಾಡಿಸದ ವಿಚಾರದ ಬಗ್ಗೆ ಮಾತನಾಡಿದ ಅವರು, ಆಪರೇಷನ್‌ ಅಗತ್ಯ ಇಲ್ಲ ಎಂದು ಇದರಿಂದಲೇ ಗೊತ್ತಾಗುತ್ತಿದೆ. ಆಪರೇಷನ್‌ ಮಾಡದಿದ್ದರೆ ಬೆನ್ನು ಮೂಳೆ ಮುರಿದು ಹೋಗುತ್ತದೆ ಎನ್ನುತ್ತಿದ್ದರು. ಇಷ್ಟು ದಿನವಾದರೂ ದರ್ಶನ್‌ಗೆ ವೈದ್ಯರು ಆಪರೇಷನ್‌ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಕೋರ್ಟ್‌ ವ್ಯವಸ್ಥೆಯಲ್ಲಿ ತೀರ್ಮಾನ ಕೊಡಬೇಕು ಎಂದು ಹೇಳಿದರು.

Tags:
error: Content is protected !!