Mysore
24
scattered clouds
Light
Dark

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್‌ ರೇವಣ್ಣ ಅರ್ಜಿ ವಿಚಾರಣೆ ಮುಂದೂಡಿಕೆ

ಬೆಂಗಳೂರು: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಎಂಎಲ್‌ಸಿ ಸೂರಜ್‌ ರೇವಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂರಜ್‌ ರೇವಣ್ಣ ಅರ್ಜಿಯನ್ನು ಜುಲೈ. 10ರಂದು ವಿಚಾರಣೆ ನಡೆಸಲಿದೆ.

ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸೆರೆವಾಸ ಅನುಭವಿಸುತ್ತಿರುವ ಸೂರಜ್‌ ರೇವಣ್ಣ ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣಕ್ಕೆ ಜಾಮೀನು ಕೋರಿ ಅರ್ಜಿ ದಾಖಲಿಸಿದ್ದಾರೆ. ಈ ಎರಡನೇ ಪ್ರಕರಣದಲ್ಲಿಯೂ ಅವರ ಬಂಧನದ ಭೀತಿಯಿದ್ದು, ಹೀಗಾಗಿ ಅವರು ಜಾಮೀನು ಕೋರಿ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಎರಡನೇ ಪ್ರಕಣದಲ್ಲಿ ಸೂರಜ್‌ ಪರ ವಕೀಲರು ಮಧ್ಯಂತರ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯದಲ್ಲಿ ಕಾಲಾವಕಾಶ ಕೋರಿದ್ದಾರೆ.

ಇದನ್ನು ಗಮನಿಸಿದ ನ್ಯಾಯಾಲಯ ಆಕ್ಷೇಪಣೆ ಸಲ್ಲಿಸದ ವರೆಗೆ ಯಾವುದೇ ಬಲವಂತದ ಕ್ರಮವಿಲ್ಲ ಎಂದು ಹೇಳಿದ್ದು, ಜಾಮೀನು ವಿಚಾರಣೆ ಅರ್ಜಿಯನ್ನು ಜುಲೈ. 10ಕ್ಕೆ ಮುಂದೂಡಿತು.