Mysore
14
overcast clouds

Social Media

ಶನಿವಾರ, 20 ಡಿಸೆಂಬರ್ 2025
Light
Dark

ಆನ್‌ಲೈನ್‌ ಆಪ್‌ನಲ್ಲಿ ಹಣ ಕಳೆದುಕೊಂಡ ಯುವಕ ನೇಣಿಗೆ ಶರಣು

ಶಿವಮೊಗ್ಗ: ಹಣವನ್ನು ಡಬಲ್‌ ಮಾಡುತ್ತದೆ ಎಂದು ನಂಬಿ ಆನ್‌ಲೈನ್‌ ಅಪ್ಲಿಕೇಷನ್‌ಗೆ ಹಣ ಹೂಡಿಕೆ ಮಾಡಿ ಮೋಸ ಹೋದ ಯುವನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಭದ್ರಾವತಿ ನಗರದ ಪೇಪರ್‌ ಲೇಔಟ್‌ನ 27 ವರ್ಷದ ಪ್ರದೀಪ್‌ ನೇಣಿಗೆ ಶರಣಾದ ಯುವಕನಾಗಿದ್ದಾನೆ.

ಮಾಚೇನಹಳ್ಳಿಯ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹಣ ಡಬಲ್‌ ಆಗುತ್ತದೆ ಎಂದು ನಂಬಿ ಹಲವು ಕಡೆಗಳಲ್ಲಿ ಸಾಲ ಮಾಡಿ ಸುಮಾರು 90 ಸಾವಿರ ರೂ.ಗಳನ್ನು ಖಾಸಗಿ ಆಪ್‌ನಲ್ಲಿ ಹೂಡಿಕೆ ಮಾಡಿದ್ದನು.

ಆದರೆ ಹಣ ವಾಪಸ್‌ ಸಿಗದೇ ಮನನೊಂದ ಪ್ರದೀಪ್‌ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಸಂಬಂಧ ಪೇಪರ್‌ಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:
error: Content is protected !!