ಶಿವಮೊಗ್ಗ: ಮೀನು ಹಿಡಿಯಲು ಹೋಗಿ ವಾಪಾಸ್ ಬರುವಾಗ ಚಾಲಕನ ನಿಯಂತ್ರಂಣ ತಪ್ಪಿ ಕಾರಿನಲ್ಲಿದ್ದ ಓರ್ವ ಸಾವನ್ನಪ್ಪಿದ್ದು, ನಾಲ್ವರು ತೀವ್ರ ಗಾಯಗೊಂಡ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಯಡೂರು ಸಮೀಪ ನಡೆದಿದೆ.
ಅತಿಶಯ(23) ಮೃತಪಟ್ಟ ಯುವಕ, ಗಾಯಗೊಂಡವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀರ್ಥಹಳ್ಳಿಯಿಂದ ಐವರು ಮೀನು ಹಿಡಿಯಲು ಕಾರಿನಲ್ಲಿ ಹೋಗಿದ್ದು, ವಾಪಾಸ್ ಬರುವಾಗ ಕಾರು ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ನುಚ್ಚು ನೂರಾಗಿದೆ.