ಬೆಂಗಳೂರು: ಮುಂದಿನ ಸೆಪ್ಟೆಂಬರ್ ತಿಂಗಳ ವೇಳೆಗೆ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಕ್ಷಿಪ್ರ ಕ್ರಾಂತಿ ಆಗುವುದು 100ಕ್ಕೆ ನೂರರಷ್ಟು ಖಚಿತ. ನನ್ನ ಹೇಳಿಕೆಗೆ ಈಗಲೂ ನಾನು ಬದ್ಧನಾಗಿದ್ದೇನೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಪುನರುಚ್ಚರಿಸಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವ ಡಾ.ಜಿ.ಪರಮೇಶ್ವರ್ ರಹಸ್ಯವಾಗಿ ಭೇಟಿಯಾಗುವ ಉದ್ದೇಶವಾದರೂ ಏನಿತ್ತು? ಕೆಲವರು ಕ್ಷಿಪ್ರ ಕ್ರಾಂತಿ ಆಗುವುದಿಲ್ಲ. ಕಡಿಮೆ ಮಟ್ಟದಲ್ಲಿ ಕ್ರಾಂತಿಯಾಗುತ್ತದೆ ಎಂದು ಸಚಿವರೇ ಒಪ್ಪಿಕೊಂಡಿದ್ದಾರೆ. ಅಂದರೆ ಕಾಂಗ್ರೆಸ್‌ನಲ್ಲಿ ಭಿನ್ನಮತ ಇರುವುದನ್ನು ಅವರು ಒಪ್ಪಿಕೊಂಡಂತಲ್ಲವೇ ಎಂದು ಮರುಪ್ರಶ್ನೆ ಮಾಡಿದರು.
ನಮ್ಮಲ್ಲಿ ಏನೂ ಇಲ್ಲ ಎಂದು ಕೆಲವರು ಹೇಳಬಹುದು. ಎರಡು ವರ್ಷಗಳಿಂದ ಕುರ್ಚಿ ಕಿತ್ತಾಟ ನಡೆಯುತ್ತಲೇ ಇದೆ. ಇದನ್ನು ಯಾರೊಬ್ಬರು ನಿರಾಕರಿಸುತ್ತಿಲ್ಲ. ಕಾಲ ಬಂದಿದೆ. ಕಾದು ನೋಡಿ. ಇನ್ನು ಬಹಳಷ್ಟು ಬೆಳವಣಿಗೆಗಳು ನಡೆಯಲಿವೆ ಎಂದು ಭವಿಷ್ಯ ನುಡಿದರು.





