Mysore
15
clear sky

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಚೀನಾದಲ್ಲಿ ಹೆಚ್ಚಾದ ಹೊಸ ಮಾದರಿ ಸೊಂಕು: ಮಾರ್ಗ ಸೂಚಿ ಪ್ರಕಟಿಸಿದ ಆರೋಗ್ಯ ಇಲಾಖೆ

ಬೆಂಗಳೂರು: ಕರೋನ ಸೋಂಕಿನಿಂದ ಇಡೀ ವಿಶ್ವವೇ ತಲ್ಲಣಕ್ಕೊಳಗಾಗಿತ್ತು. ಇದೇ ಎಲ್ಲಾ ದೇಶಗಳು ಸುಧಾರಿಸಿಕೊಂಡು ಚೇತರಿಸಿಕೊಳ್ಳುತ್ತಿದೆ. ಅಷ್ಟರಲ್ಲೇ ಚೀನಾದಲ್ಲಿ ಮತ್ತೊಂದು ಮಾದರಿಯ ಸೋಂಕು ಕಾಣಿಸಿಕೊಂಡು ಎಲ್ಲರಲ್ಲೂ ಆತಂಕ ಮನೆ ಮಾಡಿದೆ.

ಚೀನಾದಲ್ಲಿ ಕಾಣಿಸಿಕೊಂಡಿರುವ ಹೊಸ ಮಾದರಿಯ ಸೊಂಕು ಹೆಚ್ಚಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಿಳಿದು ಬಂದಿದೆ. ಚೀನಾದ ಮಕ್ಕಳಲ್ಲಿ ಸೊಂಕು ಹೆಚ್ಚಾಗಿ ಕಾಣಿಸಿಕೊಂಡಿದ್ದು, ಇದರಿಂದಾಗಿ ಮಕ್ಕಳಲ್ಲಿ ಉಸಿರಾಟದ ತೊಂದರೆ ಹೆಚ್ಚಾಗಿದೆ.ಇದರಿಂದ ಎಚ್ಚೆತ್ತಿಕೊಂಡಿರುವ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಇದೊಂದು ಸಾಮಾನ್ಯ ಸಾಂಕ್ರಾಮಿಕ ಕಾಯಿಲರಯಾಗಿದೆ. 7-8 ದಿನದವರೆಗೆ ಇರುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಸೋಕಿನ ಲಕ್ಷಣಗಳು:
ಜ್ವರ, ಕೆಮ್ಮು, ಶೀತ, ಸುಸ್ತು, ಹಸಿವಾಗದಿರುವುದು, ವಾಕರಿಕೆ, ಒಣ ಕೆಮ್ಮು ಈ ಸೋಂಕಿನ ಗುಣಲಕ್ಷಣಗಳು.

ಮಾರ್ಗಸೂಚಿಗಳು:
* ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಆರೋಗ್ಯ ಸಿಬ್ಬಂದಿ ಮಾಸ್ಕ್‌ ಖಡ್ಡಾಯವಾಗಿ ಧರಿಸಬೇಕು.
* ಕೈಗಳನ್ನು ಸಾಬೂನಿನಿಂದ ಆಗಾಗ್ಗೆ ತೊಳೆಯುತ್ತಿರಿ.
* ಕಣ್ಣ, ಮೂಗು, ಬಾಯಿಗಳನ್ನು ಪದೇ ಪದೇ ಮುಟ್ಟುವುದನ್ನು ನಿಲ್ಲಿಸಿ.
* ಹೆಚ್ಚು ಜನ ಇರುವ ಜಾಗದಲ್ಲಿ ಭೇಟಿ ಮಾಡುವುದನ್ನು ತಪ್ಪಿಸಿ.
* ಜನಸಂದಣಿ ಇರುವ ಸ್ಥಳಗಳಲ್ಲಿ ಮಾಸ್ಕ್‌ ಧರಿಸಿ.
* ಕೆಮ್ಮು ಅಥವ ಸೀನುವಾಗ ಕೈ ಅಥವ ಬಟ್ಟೆ ಅಡ್ಡ ಇಡಿ.
* ಫ್ಲೂ ಇರುವ ವ್ಯಕ್ತಿಯಿಂದ ಕನಿಷ್ಠ ಅಂತರ ಕಾಪಾಡಿಕೊಳ್ಳಿ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!