ಬೆಂಗಳೂರು: ಕೇರಳದಲ್ಲಿ ನನ್ನ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ದೊಡ್ಡ ಪ್ರಯೋಗ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇಂದು (ಮೇ.30) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇರಳದ ರಾಜರಾಜೇಶ್ವರಿ ದೇವಾಲಯದಲ್ಲಿ ಅಘೋರಿಗಳ ಮೂಲಕ ಶತ್ರು ಭೈರವಿ ಯಾಗ ನಡೆಸುತ್ತಿದ್ದಾರೆ. ಇದು ಶತ್ರು ಸಂಹಾರ ಪೂಜೆಯಾಗಿದೆ. ನಮ್ಮ ವಿರುದ್ಧ ಪಂಚಬಲಿ ಯಾಗ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಪೂಜೆ ಇವತ್ತು ಪ್ರಾರಂಭವಾಗಿದೆ. ಮಧ್ಯರಾತ್ರಿಯ ತನಕೆ ಈ ಪೂಜೆ ನಡೆಯುತ್ತದೆ. ಇದು ಶತ್ರು ಭೈರವಿ ಯಾಗ. 21 ಮೇಕೆ, 3 ಎಮ್ಮೆ, 28 ಕಪ್ಪು ಮೇಕೆ , 5 ಹಂದಿಯನ್ನು ಬಲಿ ಕೊಟ್ಟು ಅಘೋರಿಗಳ ಮೂಲಕ ಈ ಯಾಗ ನಡೆಸುತ್ತಿದ್ದಾರೆ. ಈ ಯಾಗ ಶತ್ರು ಸಂಹಾರದ ಭಾಗವಾಗಿದೆ. ಈ ಯಾಗ ನಡೆಸುತ್ತಿರುವವರು ಯಾರು ಎಂಬುದು ಕೂಡ ತಿಳಿದಿದೆ. ನಾವು ನಂಬಿದ ದೇವರೇ ನಮ್ಮನ್ನು ಕಾಪಾಡುತ್ತದೆ ಎಂದರು.





