Mysore
22
mist

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಇಂದಿನಿಂದ ರೈತರ ಪಂಪ್‌ಸೆಟ್‌ಗಳಿಗೆ 7 ಗಂಟೆ ವಿದ್ಯುತ್ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಇಂದಿನಿಂದ ಪಂಪ್‌ಸೆಟ್‌ಗಳಿಗೆ 7 ಗಂಟೆ ವಿದ್ಯುತ್ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ ನಡೆದ ಇಂಧನ ಇಲಾಖೆ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಅವರು, ಕಬ್ಬು ಬೆಳೆಗಾರರಿಗೆ 7 ಗಂಟೆ ವಿದ್ಯುತ್ ಕೊಡುತ್ತೇವೆ ಎಂದು ಹೇಳಿದ್ದೆ, ಈಗ 7 ಗಂಟೆ ವಿದ್ಯುತ್ ನೀಡಲು ನಿರ್ಧರಿಸಿದ್ದೇವೆ ಎಂದರು.

ರಾಯಚೂರು, ಬಳ್ಳಾರಿ, ಯಾದಗಿರಿ, ಕೊಪ್ಪಳದವರು ನಮಗೆ ಭತ್ತ ಬೆಳೆಯಲು 7 ಗಂಟೆ ವಿದ್ಯುತ್ ಕೊಡಿ ಅಂತಾ ಮನವಿ ಮಾಡಿದ್ದರು. ಮುಂಚೆ 5 ಗಂಟೆ ವಿದ್ಯುತ್ ಕೊಡುತ್ತಿದ್ದ ಪ್ರದೇಶದಲ್ಲೂ 7 ಗಂಟೆ ಕೊಡೋದಕ್ಕೆ ನಿರ್ಧಾರ ಮಾಡಿದ್ದೇವೆ. ರಾಯಚೂರು, ಬಳ್ಳಾರಿಯಲ್ಲಿ‌ ಥರ್ಮಲ್ ಪವರ್ ಉತ್ಪಾದನೆಯಾಗ್ತಿದೆ ಎಂದಿದ್ದಾರೆ.

ಸೆಕ್ಷನ್ ಲೆವೆಲ್ ಉಪಯೋಗಿಸಿ ಉತ್ಪಾದನೆಯಾಗುವ ವಿದ್ಯುತ್‌ ಅನ್ನು ಹೊರ ರಾಜ್ಯಗಳಿಗೆ ಕೊಡಬಾರದು ಅಂತಾ ನಿರ್ಧಾರ ಮಾಡಲಾಗಿದೆ. ವಿದ್ಯುತ್ ಖರೀದಿಗೂ ನಿರ್ಧರಿಸಲಾಗಿದೆ. ಕೈಗಾರಿಕೆಗಳಿಗೆ ಡೊಮೆಸ್ಟಿಕ್ ಪವರ್ ಕಟ್ ಇಲ್ಲ. ಪಂಪ್‌ಸೆಟ್ ಗೆ ನೀಡುವ ವಿದ್ಯುತ್‌ಗೆ ಸರ್ಕಾರವೇ ಸಬ್ಸಿಡಿ ನೀಡಲಿದೆ ಎಂದಿದ್ದಾರೆ. ಇದಕ್ಕಾಗಿ 12,100 ಕೋಟಿ ರೂಪಾಯಿಯನ್ನು ಬಜೆಟ್‌ನಲ್ಲಿ ಒದಗಿಸಿದ್ದೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಗೃಹಜ್ಯೋತಿ ಬಂದ ಮೇಲೆ ಅಮೃತ ಜ್ಯೋತಿ, ಕುಟೀರ ಜ್ಯೋತಿ ಯೋಜನೆಯನ್ನು ಗೃಹಜ್ಯೋತಿ ಯೋಜನೆಯಡಿ ಸೇರಿದ್ದೇವೆ. ಅವರಿಗೆ ಸರಾಸರಿ 58 ಯುನಿಟ್ ನೀಡಲಾಗುವುದು. ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತಜ್ಯೋತಿ ಈ ಯೋಜನೆಗಳಲ್ಲಿ 38,966 ಕೋಟಿ ಹಣ ಬಾಕಿ ಉಳಿದಿತ್ತು. ಮಂಗಳೂರು , ಗುಲ್ಬರ್ಗಾ, ಚಾಮುಂಡೇಶ್ವರಿ ವಿದ್ಯುತ್ ಕಂಪನಿ ಸೇರಿದಂತೆ ಹಲವು ಕಂಪನಿಗಳಲ್ಲಿ ಬಾಕಿ ಉಳಿದಿತ್ತು. ಈ ಹಣವನ್ನ ಮನ್ನಾ ಮಾಡುತ್ತೇವೆ. ಅವರು ಬಾಕಿ ಕಟ್ಟಬೇಕಾದ ಅಗತ್ಯವಿಲ್ಲ ಎಂದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!