Mysore
32
few clouds

Social Media

ಮಂಗಳವಾರ, 24 ಫೆಬ್ರವರಿ 2026
Light
Dark

ನೇಹಾ ಹೀರೆಮಠ ಹತ್ಯೆ ಪ್ರಕರಣ: ಸಿಐಡಿಯಿಂದ 483 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ

ಬೆಂಗಳೂರು: ಹುಬ್ಬಳ್ಳಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹೀರೆಮಠ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 483 ಪುಟಗಳ ದೋಷಾರೋಪ ಪಟ್ಟಿಯನ್ನು ಸಿಐಡಿ ಅಧಿಕಾರಿಗಳು ಸೋಮವಾರ(ಜುಲೈ.8) ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಏ.18 ರಂದು ಹುಬ್ಬಳ್ಳಿಯ ವಿದ್ಯಾನಗರದ ಖಾಸಗಿ ಕಾಲೇಜಿನ ಮುಂಬಾಗ ಆಕೆಯ ಸ್ನೇಹಿತ ಫಯಾಜ್‌ ಎಂಬಾತನು ಚಾಕುವಿನಿಂದ ಹಿರಿದು ನೇಹಾಳ ಹತ್ಯೆ ಮಾಡಿದ್ದನು. ಸ್ನೇಹಾಳಿಗೆ ಫಯಾಜ್‌ ಪ್ರೀತಿ ಮಾಡುವಂತೆ ಒತ್ತಾಯಿಸಿದ್ದ, ಇದನ್ನು ನಿರಾಕರಿಸಿದ ನೇಹಾ ಮೇಲೆ ಸಿಟ್ಟಿಗಾದ ಫಯಾಜ್‌ ಕಾಲೇಜಿನಲ್ಲೇ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ.

ಈ ಪ್ರಕರಣ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. ಈ ಕೊಲೆಯನ್ನು ಖಂಡಿಸಿ ರಾಜ್ಯಾದ್ಯಂತ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ನೇಹಾ ಹೀರೆಮಠ್‌ ಅವರ ಪ್ರಕರಣವನ್ನು ಸರ್ಕಾರ ಸಿಐಡಿ ಹಸ್ತಾಂತರಿಸಿ ತ್ವರಿತಗತಿಯಲ್ಲಿ ಪ್ರಕರಣ ತನಿಖೆ ಮುಗಿಸುವಂತೆ ಹೇಳಿತ್ತು.

ಸಿಐಡಿ ಡಿವೈಎಸ್‌ಪಿ ಎನ್‌.ಎಚ್‌ ಪೈಕ್‌ ಅವರ ತಂಡ ಮೂರನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ 483 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ.

Tags:
error: Content is protected !!