ಬೆಂಗಳೂರು: 2024ನೇ ಸಾಲಿನ ದ್ವಿತೀಯ ಪಿಯುಸಿ ಮೂರು ಪರೀಕ್ಷೆಗಳ ಕ್ರೋಡೀಕೃತ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬಿಡುಗಡೆ ಮಾಡಿದೆ. ಅದರಲ್ಲಿ ಶೇಕಡಾ 84.87 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಈ ಬಾರಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಫಲಿತಾಂಶದಲ್ಲಿ ಶೇಕಡಾ 10.2ರಷ್ಟು ಏರಿಕೆಯಾಗಿದೆ.
ಗಣಿತ ವಿಜ್ಞಾನದಲ್ಲಿ 7378, ಜೀವ ವಿಜ್ಞಾನದಲ್ಲಿ 5,959, ಕನ್ನಡದಲ್ಲಿ 2,595, ಅರ್ಥಶಾಸ್ತ್ರದಲ್ಲಿ 1452 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಗಳಿಸಿದ್ದಾರೆ.
ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಶೇ.98.59, ಉಡುಪಿ ಶೇ98.45, ಉತ್ತರ ಕನ್ನಡ ಶೇ94.64 ಮೊದಲ ಮೂರು ಸ್ಥಾನಗಳನ್ನು ಪಡೆದಿವೆ.
536 ಖಾಸಗಿ ಮತ್ತು 71 ಸರ್ಕಾರಿ ಕಾಲೇಜುಗಳು ಶೇಕಡಾ 100 ಫಲಿತಾಂಶ ಪಡೆದಿವೆ. ಫಲಿತಾಂಶದಲ್ಲಿ ಖಾಸಗಿ ಕಾಲೇಜುಗಳು ಮೂಂಚೂಣಿಯಲ್ಲಿವೆ. ಸರ್ಕಾರಿ ಕಾಲೇಜುಗಳ ಒಟ್ಟು ಫಲಿತಾಂಶ ಶೇಕಡಾ 74.02 ರಷ್ಟಾಗಿದೆ.