Mysore
21
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಡಿಕೆಶಿ ಸೇರಿ 2 ಡಜನ್‌ ಜನರು ಸಿಎಂ ಆಗಲು ಅರ್ಹರಿದ್ದಾರೆ!: ಸಚಿವ ರಾಜಣ್ಣ

ಹಾಸನ : ರಾಜ್ಯದಲ್ಲಿ ಮುಖ್ಯಮಂತ್ರಿ ಆಗುವ ಅರ್ಹತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಇದೆ. ಹಾಗೆಯೇ ಕಾಂಗ್ರೆಸ್ ಪಕ್ಷದ ಇನ್ನು ಎರಡು ಡಝನ್ ಜನ (24 ಮಂದಿ) ಈ ರೀತಿ ಅರ್ಹತೆ ಇರುವವರಿದ್ದಾರೆ. ಆದರೆ ನಮ್ಮ‌ ರಾಜ್ಯದಲ್ಲಿ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರಬೇಕು ಎನ್ನೋದು ಬಹುಜನರ ಬಯಕೆಯಾಗಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಕಾಂಗ್ರೆಸ್‌ನಲ್ಲಿ ಮತ್ತೊಂದು ಬಾಂಬ್‌ ಸಿಡಿಸಿದ್ದಾರೆ.

ಹಾಸನದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಸಿಎಂ ಆಗಬೇಕು ಎಂದು ಕೆಲವು ಕಾಂಗ್ರೆಸ್ ಶಾಸಕರು ಅಭಿಪ್ರಾಯ ಹೇಳಿರಬಹುದು ಅದರಲ್ಲಿ ತಪ್ಪೇನಿದೆ. ಲೋಕೋ ವಿಭಿನ್ನ ರುಚಿಃ ಎನ್ನುವ ಹಾಗೆ ಅವರ ಅಭಿಪ್ರಾಯವೂ ಇದೆ.ಒಬ್ಬೊಬ್ಬರಿಗೆ ಒಂದರಲ್ಲಿ ಆಸಕ್ತಿ ಇರುತ್ತದೆ. ಡಿ.ಕೆ. ಶಿವಕುಮಾರ್ ಕೂಡ ಅರ್ಹರಿದಾರೆ, ಉತ್ರಮ ಸಂಘಟಕರು ಅವರು. ಪಕ್ಷದಲ್ಲಿ ಅವರು ಮೊದಲಿನಿಂದಲೂ ನಿಷ್ಟಾವಂತರಿದಾರೆ. ಹಾಗಾಗಿ ಅವರು ಮುಖ್ಯಮಂತ್ರಿ ಆಗೋ ಅರ್ಹತೆ ಹೊಂದಿದ್ದಾರೆ.

ಡಿ.ಕೆ. ಶಿವಕುಮಾರ್‌ ಅವರಂತೆಯೇ ಕಾಂಗ್ರೆಸ್ ಪಕ್ಷದಲ್ಲಿ ಇನ್ನೂ ಎರಡು ಡಝನ್ (24 ಮಂದಿ) ಜನ ಈ ರೀತಿ ಮುಖ್ಯಮಂತ್ರಿ ಆಗು ಅರ್ಹತೆ ಇರುವವರು ಇದ್ದಾರೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಎಂದರೆ ಸಂತೋಷ ಪಡೋರಲ್ಲಿ ನಾವೂ ಒಬ್ಬರು. ಆದರೆ ನಮ್ಮ‌ ರಾಜ್ಯದಲ್ಲಿ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರಬೇಕು ಎನ್ನೋದು ಬಹುಜನರ ಬಯಕೆಯಾಗಿದೆ. ಆ ಬಯಕೆ ನಾವು ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಬಹುತೇಕ ಶಾಸಕರ ಬಯಕೆಯೂ ಅದೇ ಆಗಿದೆ ಎಂದು ಹೇಳಿದರು.

ಶಾಸಕರ ಬಯಕೆ ಏನೆ ಇದ್ದರೂ ಎಲ್ಲಾ ಶಾಸಕರು ಹೈ ಕಮಾಂಡ್ ನಿರ್ಧಾರಕ್ಕೆ ಬದ್ದರಾಗಿರುವವರೇ ಇದ್ದಾರೆ. ಹೈ ಕಮಾಂಡ್ ನಿರ್ಧಾರ ಎನ್ನುತ್ತಲೇ ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರಬೇಕು ಎಂದು ಸಚಿವ ರಾಜಣ್ಣ ತಮ್ಮ ಇಂಗಿತ ವ್ಯಕ್ತಪಡಿಸಿದರು. ಎರಡು ವರ್ಷ ಆದ ಬಳಿಕ ನಾಯಕತ್ವ ಬದಲಾವಣೆ ವಿಚಾರದ ಕುರಿತು ಮಾತನಾಡಿ, ಅಯ್ಯೋ ಅಲ್ಲಿವರೆಗೆ ನೋಡೋಣ ಬಿಡಿ. ಆಗ ಯಾರಿರ್ತಾರೊ ಬದುಕೋರು ಯಾರು ಸಾಯೋರು ಯಾರು? ಅದಕ್ಕೆ ಯಾಕೆ ತಲೆ ಕೆಡಿಸಿಕೊಳ್ತಿರಾ ಎಂದು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ