Mysore
19
broken clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

18 ಪೊಲೀಸ್‌ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

police aword (1)

ಬೆಂಗಳೂರು : ಗಣನೀಯ ಸೇವೆ ಸಲ್ಲಿಸಿದ 18 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳಿಗೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೀಡುವ ರಾಷ್ಟ್ರಪತಿ ಪದಕ ಲಭಿಸಿದೆ. ಲೋಕಾಯುಕ್ತ ಬೆಂಗಳೂರು ಕೇಂದ್ರದಲ್ಲಿ ಎಸ್‌ಪಿಯಾಗಿರುವ ಎಸ್. ಬದ್ರಿನಾಥ್ ಅವರಿಗೆ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಲಭಿಸಿದೆ. ಹಲವಾರು ಕ್ಲಿಷ್ಟಕರ ಪ್ರಕರಣಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕಾಗಿ ರಾಷ್ಟ್ರಪತಿಗಳಿಂದ ಪ್ರಶಂಸೆ ವ್ಯಕ್ತಪಡಿಸಿ ವಿಶಿಷ್ಟ ಸೇವಾ ಪದಕವನ್ನು ನೀಡಲಾಗುತ್ತಿದೆ.

ರಾಜ್ಯ ಗುಪ್ತಚರ ಐಜಿಪಿ ಡಾ. ಚಂದ್ರಗುಪ್ತ, ಎಐಜಿಪಿ (ಅಪರಾಧ ಮುಖ್ಯಅಧಿಕಾರಿ) ಕಲಾ ಕೃಷ್ಣಮೂರ್ತಿ, ಕೆಎಸ್‌ಆರ್‌ಪಿ 9ನೇ ಬೆಟಾಲಿಯನ್‌ನ ಕಮಾಂಡರ್ ಡಾ. ರಾಮಕೃಷ್ಣ ಮುದ್ದಿಪೈ, ಗುಪ್ತಚರ ವಿಭಾಗದ ಎಸ್‌ಪಿ ಕಲೀಮನಿ ಮಹದೇವಪ್ಪ ಶಾಂತರಾಜು, ಸಿಐಡಿ ಎಸ್‌ಪಿ ಎನ್. ವೆಂಕಟೇಶ ನಾರಾಯಣ, ಮಹದೇವಪುರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಜಿ.ಪ್ರವೀಣ್ ಬಾಬು ಗುರುಸಿದ್ದಯ್ಯ, ಕೆಜಿಹಳ್ಳಿ ಉಪ ವಿಭಾಗದ ಎಸಿಪಿ ಪ್ರಕಾಶ್ ರಾಥೋಡ್, ಬೆಸ್ಕಾಂ ಜಾಗೃತದಳ ಇನ್‌ಸ್ಪೆಕ್ಟರ್ ಎಡ್ವಿನ್ ಪ್ರದೀಪ್ ಸ್ಯಾಮ್‌ಸನ್, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸತೀಶ್ ಸದಾಶಿವಯ್ಯ ಬೆಟ್ಟಹಳ್ಳಿ, ನಂದಗುಡಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಶಾಂತರಾಮ, ಮಂಗಳೂರು ಸಿಸಿಬಿ ಎಎಸ್‌ಐ ಸುಜನ ಶೆಟ್ಟಿ, ಬೆಂಗಳೂರು ಎಸ್‌ಸಿಆರ್‌ಬಿ ಪಿಎಸ್‌ಐ ಝಾನ್ಸಿರಾಣಿ ಡಿಪಿಓ ಗದಗ ಜಿಲ್ಲೆ ಎಎಸ್‌ಐ ಗುರುರಾಜ ಮಹಾದೇವಪ್ಪ ಬುದ್ದಿಲ್, ಬೆಂಗಳೂರು ಕೆಎಸ್‌ಆರ‍್ಪಿ 4ನೇ ಬೆಟಾಲಿಯನ್ ಹೆಡ್‌ಕಾನ್‌ಸ್ಟೆಬಲ್ ಎಂ.ಜೆ. ರಾಜೇಶ್, ಕೊಪ್ಪಳ ಗಣಕಯಂತ್ರ ವಿಭಾಗ ಡಿಪಿಓ ಹೆಡ್‌ಕಾನ್‌ಸ್ಪೇಬಲ್ ಶಮ್‌ಸುದ್ದೀನ್, ಬೆಂಗಳೂರು ನಗರ ಗುಪ್ತಚರ ಹೆಡ್‌ಕಾನ್‌ಸ್ಪೆಬಲ್ ವೈ. ಶಂಕರ್, ಗುಲ್ಬರ್ಗ ನಗರ ಪೊಲೀಸ್ ಆಯುಕ್ತರ ಕಚೇರಿಯ ಹೆಡ್‌ಕಾನ್‌ಸ್ಟೆಬಲ್ ಅಲಂಕಾರ್ ರಾಕೇಶ್ ರವಿನಾ ಸಿದ್ದಪ್ಪ, ಗುಪ್ತಚರ ವಿಭಾಗ ಸಿವಿಲ್ ಹೆಡ್‌ಕಾನ್‌ಸ್ಟೆಬಲ್ ಎಲ್. ರವಿ ಅವರಿಗೆ ರಾಷ್ಟ್ರಪತಿಗಳ ಪ್ರಶಂಸನೀಯ ಸೇವಾ ಪದಕ ಲಭಿಸಿದೆ.

Tags:
error: Content is protected !!