Mysore
20
broken clouds

Social Media

ಶುಕ್ರವಾರ, 30 ಜನವರಿ 2026
Light
Dark

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ 15 ಮಂದಿ ಆಯ್ಕೆ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2023ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ ಹಾಗೂ ಸಾಹಿತ್ಯ ಶ್ರೀ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಐವರು ಹಿರಿಯ ಸಾಹಿತಿಗಳಿಗೆ ವಾರ್ಷಿಕ ಗೌರವ ಹಾಗೂ 10 ಮಂದಿಗೆ ಸಾಹಿತ್ಯ ಶ್ರೀ ಪ್ರಶಸ್ತಿ ದೊರೆತಿದೆ.

ಕನ್ನಡ ಸಾರಸತ್ವ ಲೋಕದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಐವರು ಹಿರಿಯ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ನಿರ್ಧಾರ ಮಾಡಲಾಗಿದೆ.

ಗೌರವ ಪ್ರಶಸ್ತಿ ಪುರಸ್ಕೃತರು:
ಡಾ.ಸಿ.ವೀರಣ್ಣ ಬೆಂಗಳೂರು, ಡಾ.ಶ್ರೀರಾಮ ಹಿಟ್ಟಣ ಬಾಗಲಕೋಟೆ, ಜಾಣಗೆರೆ ವೆಂಕಟರಾಮಯ್ಯ ತುಮಕೂರು, ಎಂ.ಎಂ.ಮದರಿ ಕೊಪ್ಪಳ, ಡಾ.ಸಬೀಹಾ ಭೂಮಿಗೌಡ ಮಂಗಳೂರು ಇವರು ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದು, 50 ಸಾವಿರ ನಗದು, ಪ್ರಶಸ್ತಿ ಫಲಕ ಹಾಗೂ ಪ್ರಮಾಣಪತ್ರ ಒಳಗೊಂಡಿದೆ.

ಮಾರ್ಚ್.‌24ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಸಾಹಿತ್ಯ ಶ್ರೀ ಪ್ರಶಸ್ತಿ ಪುರಸ್ಕೃತರು:
ಮೈಸೂರಿನ ಡಾ.ಎಂ.ಎನ್.ಶೇಖರ್‌, ಬೆಂಗಳೂರಿನ ಜಿ.ಎನ್.ಮೋಹನ್‌, ತುಮಕೂರಿನ ಡಾ.ಟಿ.ಎಸ್.ವಿವೇಕಾನಂದ, ಬೆಳಗಾವಿಯ ಡಾ.ಜಯಶ್ರೀ ಕಂಬಾರ, ಧಾರವಾಡದ ನಿಜಲಿಂಗಪ್ಪ ಯಮನಪ್ಪ ಮಟ್ಟಿಹಾಳ, ಕೋಲಾರ ಡಾ.ಬಾಲಗುರುಮೂರ್ತಿ, ಕಲಬುರ್ಗಿಯ ಪ್ರೊ.ಶಿವಗಂಗಾರುಮ್ಮ, ಬೆಂಗಳೂರಿನ ಡಾ.ರೀಟಾರೀನಿ, ಶಿವಮೊಗ್ಗದ ಡಾ.ಕಲೀಂವುಲ್ಲಾ ಹಾಗೂ ಬಳ್ಳಾರಿಯ ಡಾ.ವೆಂಕಟಗಿರಿ ದಳವಾಯಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Tags:
error: Content is protected !!