Mysore
21
mist

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ವಿವಿಧ ಕ್ರೀಡಾಕೂಟದಲ್ಲಿ ಪದಕ ಗೆದ್ದ ರಾಜ್ಯದ 12 ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ಭಾಗ್ಯ

ಬೆಂಗಳೂರು: ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ರಾಜ್ಯಕ್ಕೆ ಪದಕ ತಂದುಕೊಟ್ಟ ಕ್ರೀಡಾಪಟುಗಳಿಗೆ ಸರ್ಕಾರವು ಬಂಪರ್‌ ಕೊಡುಗೆ ನೀಡಿದ್ದು, ಒಂದು ಡಜನ್ ಕ್ರೀಡಾಪಟುಗಳ ಭವಿಷ್ಯಕ್ಕೆ ಸಿಎಂ ಸಿದ್ದರಾಮಯ್ಯ ಮುನ್ನುಡಿ ಬರೆದಿದ್ದಾರೆ.

ಭಾನುವಾರ(ಆ.4) ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿoದ ಒಲoಪಿಕ್ಸ್, ಪ್ಯಾರಾಲಿoಪಿಕ್ಸ್, ಏಷಿಯನ್ ಗೇಮ್ಸ್, ಪ್ಯಾರಾ ಏಷಿಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್‌ಗಳಲ್ಲಿ ಪದಕ ವಿಜೇತ ಸಾಧಕ 12 ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಗ್ರೂಪ್ ಎ, ಬಿ ಮತ್ತು ಇತರ ಹುದ್ದೆಗಳಿಗೆ ನೇಮಕಾತಿಗೆ ಆಫರ್ ಲೆಟರ್ ವಿತರಿಸಿದರು.

ಈ ವೇಳೆ ಮುಖ್ಯಮoತ್ರಿ ಅವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿoದ ರಾಜು, ಯುವ ಸಬಲೀಕರಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎನ್. ಮoಜುನಾಥ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಯಾರಿಗೆ ಯಾವ ಹುದ್ದೆ?
ಗಿರೀಶ್‌ ಹೆಚ್,ಎನ್- ಕ್ಲಾಸ್‌ ಒನ್‌ ಆಫೀಸರ್‌ ಹುದ್ದೆ
ದಿವ್ಯಾ ಟಿ.ಎಸ್‌ – ಗ್ರೂಪ್‌ ಬಿ ಹುದ್ದೆ
ಉಷಾರಾಣಿ ಎನ್-‌ ಗ್ರೂಪ್‌ ಬಿ ಹುದ್ದೆ
ಸುಷ್ಮಿತ ಪವರ್‌ ಓ -‌ ಗ್ರೂಪ್‌ ಬಿ ಹುದ್ದೆ
ನಿಕ್ಕಿನ್‌ ತಿಮ್ಮಯ್ಯ -‌ ಗ್ರೂಪ್‌ ಬಿ ಹುದ್ದೆ
ಎಸ್.ವಿ ಸುನೀಲ್‌ -‌ ಗ್ರೂಪ್‌ ಬಿ ಹುದ್ದೆ
ಕಿಶನ್‌ ಗಂಗೊಳ್ಳಿ -‌ ಗ್ರೂಪ್‌ ಬಿ ಹುದ್ದೆ
ರಾಘವೇಂದ್ರ -‌ ಗ್ರೂಪ್‌ ಬಿ ಹುದ್ದೆ
ರಾಧಾ ವಿ -‌ ಗ್ರೂಪ್‌ ಬಿ ಹುದ್ದೆ
ಶರತ್‌ ಎಂ.ಎಸ್‌ -‌ ಗ್ರೂಪ್‌ ಬಿ ಹುದ್ದೆ
ಗುರುರಾಜು -‌ ಗ್ರೂಪ್‌ ಬಿ ಹುದ್ದೆ
ಮಲಪ್ರಭಾ ಯಲ್ಲಪ್ಪ ಜಾಧವ -‌ ಗ್ರೂಪ್‌ ಬಿ ಹುದ್ದೆ

 

Tags:
error: Content is protected !!