ಬೆಂಗಳೂರು : ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 1,52,760 ಮೆಟ್ರಿಕ್ ಟನ್ ಯೂರಿಯ ರಸಗೊಬ್ಬರ ಸರಬರಾಜು ಆಗುವುದು ಬಾಕಿ ಇದೆ ಎಂದು ಕೃಷಿ ಸಚಿವ ಎಂ.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 11,17,000 ಮೆಟ್ರಿಕ್ ಟನ್ ರಸಗೊಬ್ಬರ ಹಂಚಿಕೆಯಾಗಿದೆ ಎಂದಿದ್ದಾರೆ.
ಏಪ್ರಿಲ್‌ನಿಂದ ಜು.26 ರವರೆಗೆ ಯೂರಿಯ ರಸಗೊಬ್ಬರದ ಬೇಡಿಕೆ, 6,80,655 ಮೆಟ್ರಿಕ್ ಟನ್‌ನಷ್ಟಿದೆ. ಕೇಂದ್ರ ಸರ್ಕಾರ 5,27, 895 ಮೆಟ್ರಿಕ್ ಟನ್ ಯೂರಿಯಾವನ್ನು ಸರಬರಾಜು ಮಾಡಿದೆ. ಹಳೆಯ ದಾಸ್ತಾನು 3,46,499 ಮೆಟ್ರಿಕ್ ಟನ್ ಇತ್ತು ಅವರು ಹೇಳಿದ್ದಾರೆ.
ಒಟ್ಟು 8.74,394 ಮೆಟ್ರಿಕ್ ಟನ್ ಯೂರಿಯ ದಾಸ್ತಾನಿನಲ್ಲಿ 7,30,659 ಮೆಟ್ರಿಕ್ ಟನ್ ವಿತರಣೆ ಮತ್ತು ಮಾರಾಟ ಮಾಡಲಾಗಿದೆ. ಇನ್ನು 1,53,735 ಮೆಟ್ರಿಕ್ ಟನ್ ದಾಸ್ತಾನಿದೆ ಎಂದು ಮಾಹಿತಿ ನೀಡಿದ್ದಾರೆ.
ಶನಿವಾರವಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಯೂರಿಯ ರಸಗೊಬ್ಬರದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.





