Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಡಬ್ಲ್ಯುಟಿಸಿ ಫೈನಲ್‌: ಶುಭ್‌ಮನ್‌ ಗಿಲ್‌ಗೆ ದಂಡ

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಡಿಫೆನ್ಸ್‌ ಪ್ರಯತ್ನದಲ್ಲಿದ್ದ ಶುಭ್‌ಮನ್‌ ಗಿಲ್‌ ಅವರನ್ನು ವಂಚಿಸಿದ ಚೆಂಡು ಸ್ಲಿಪ್‌ನಲ್ಲಿ ನಿಂತಿದ್ದ ಕ್ಯಾಮರಾನ್‌ ಗ್ರೀನ್‌ ಅವರ ಕೈ ಸೇರಿತ್ತು. ಗ್ರೀನ್‌ ಅದ್ಭುತವಾಗಿ ಕ್ಯಾಚ್‌ ಹಿಡಿದಿದ್ದರೂ, ಈ ಕ್ಯಾಚ್‌ ಆಟಗಾರರರಿಗೂ ಕ್ರಿಕೆಟ್‌ ಅಭಿಮಾನಿಗಳಿಗೂ ಸಂದೇಹ ತರಿಸಿತ್ತು.

ಈ ವಿವಾದಾತ್ಮಕ ತೀರ್ಪಿನಿಂದ ಅಸಮಾಧಾನಗೊಂಡಿದ್ದ ಶುಭ್‌ಮನ್‌ ಗಿಲ್‌ ಟಿವಿ ಅಂಪೈರ್‌ ನೀಡಿದ್ದ ಈ ತೀರ್ಪನ್ನು ಟೀಕಿಸಿದ್ದರು. ಈ ಕಾರಣಕ್ಕಾಗಿ ಗಿಲ್‌ ಅವರಿಗೆ ಪಂದ್ಯ ಶುಲ್ಕದ ಶೇ. 15 ರಷ್ಟು ದಂಡ ವಿಧಿಸಲಾಗಿದೆ.

ಶನಿವಾರ ನಾಲ್ಕನೇ ದಿನದಾಟದ ಅಂತ್ಯಕ್ಕೆ ಶುಭ್‌ಮನ್‌ ಗಿಲ್‌ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಗ್ರೀನ್‌ ಕ್ಯಾಚ್‌ ಪಡೆಯುತ್ತಿರುವ ಸ್ಕ್ರೀನ್‌ಶಾಟ್‌ ಜೊತೆಗೆ ʻಚಪ್ಪಾಳೆ ತಟ್ಟುತ್ತಿರುವʼ ಎಮೋಜಿಯನ್ನು ಸ್ಟೋರಿ ಹಾಕಿದ್ದರು. ಅದು ತಮ್ಮ ಕ್ಯಾಚ್‌ ಔಟ್‌ ತೀರ್ಪಿನ ಬಗ್ಗೆ ಅಂಪೈರ್‌ಗಳ ವಿರುದ್ಧ ಅಸಮಾಧಾನ ಹೊರಹಾಕಿದಂತಿತ್ತು.

ಮೂರನೇ ಅಂಪೈರ್‌ ಅವರ  ನಿರ್ಧಾರವನ್ನು ಟೀಕಿಸುವ ಮೂಲಕ ಮೂಲಕ ಗಿಲ್‌ ಅವರು ಐಸಿಸಿ ಮೊದಲನೇ ಹಂತದ ನಿಯಮವನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರಿಗೆ ಪಂದ್ಯ ಶುಲ್ಕದ ಶೇ.15 ರಷ್ಟು ದಂಡ ವಿಧಿಸಗಿದೆ.

ಭಾರತ- ಅಸ್ಟ್ರೇಲಿಯ ತಂಡಗಳಿಗೂ ದಂಡ

ನಿಧಾನಗತಿಯ ಬೌಲಿಂಗ್‌ಗಾಗಿ ಟೀಮ್‌ ಇಂಡಿಯಾಗೆ ಪಂದ್ಯ ಶುಲ್ಕದ ಶೇ. 100 ರಷ್ಟು ದಂಡ ವಿಧಿಸಲಾಗಿದೆ. ಅದಲ್ಲದೇ ಆಸ್ಟ್ರೇಲಿಯಾ ತಂಡಕ್ಕೂ ಪಂದ್ಯ ಶುಲ್ಕದಲ್ಲಿ ಶೇ. 80ರಷ್ಟು ದಂಡವನ್ನು ವಿಧಿಸಲಾಗಿದೆ ಎಂದು ಐಸಿಸಿ ಹೇಳಿಕೊಂಡಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ