ನವದೆಹಲಿ : ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ರಾಷ್ಟ್ರೀಯ ತಂಡದ ಆಟಗಾರರ ಜರ್ಸಿಗಳಲ್ಲಿ ಇಂಡಿಯಾ ಬದಲಿಗೆ ಭಾರತ್ ಎಂದು ಬರೆಯಬೇಕೆಂದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮಂಗಳವಾರ ಬಿಸಿಸಿಸಿಐಗೆ ಆಗ್ರಹಿಸಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಜಯ್ ಶಾಗೆ ತಮ್ಮ ಸಲಹೆಯನ್ನು ನೀಡಿರುವ ಸೆಹ್ವಾಗ್, ಆಟಗಾರರು ಭಾರತ್ ಎಂದು ಬರೆದಿರುವ ಜರ್ಸಿಗಳನ್ನು ಧರಿಸಬೇಕು. ಹೆಸರು ನಮ್ಮಲ್ಲಿ ಹೆಮ್ಮೆ ಹುಟ್ಟುಹಾಕಬೇಕು ಎಂದು ನಾನು ಯಾವಾಗಲೂ ನಂಬುತ್ತೇನೆ. ನಾವು ಭಾರತೀಯರು. ಇಂಡಿಯಾ ಎನ್ನುವುದು ಬ್ರಿಟಿಷರು ನೀಡಿದ ಹೆಸರು. ಭಾರತ್ ಎಂಬ ಹೆಸರು ಯಾವಾಗಲೋ ಇಡಬೇಕಾಗಿತ್ತು ಎಂದು ಹೇಳಿದ್ದಾರೆ.
ಈ ವಿಶ್ವಕಪ್‌ನಲ್ಲಿ ನಮ್ಮ ಆಟಗಾರರು ಭಾರತ್ ಹೆಸರಿನ ಜರ್ಸಿಗಳನ್ನು ಧರಿಸುವುದನ್ನು ಖಚಿತಪಡಿಸಬೇಕೆಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾಗೆ ವಿನಂತಿಸುವೆ. ಟೀಮ್ ಇಂಡಿಯಾ ಅಲ್ಲ ಟೀಮ್ ಭಾರತ್ ಆಗಬೇಕು ಎಂದು ಸೆಹ್ವಾಗ್ ಎಕ್ಸ್‌ನಲ್ಲಿ ಬರೆದಿದ್ದಾರೆ.
ಸೆ.9ರಂದು ರಾಷ್ಟ್ರಪತಿ ಭವನದಲ್ಲಿ ನಡೆಯುವ ಜಿ-20 ಔತಣಕೂಟಕ್ಕೆ ಎಂದಿನಂತೆ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲಿಗೆ ಪ್ರೆಸಿಡೆಂಡ್ ಆಫ್ ಭಾರತ್ ಹೆಸರಿನಲ್ಲಿ ಆಹ್ವಾನ ಪತ್ರಗಳನ್ನು ಕಳುಹಿಸಿರುವುದು ವಿವಾದ ಉಂಟಾಗಿರುವಾಗಲೇ ಸೆಹ್ವಾಗ್ ಈ ಹೇಳಿಕೆ ನೀಡಿದ್ದಾರೆ