ಪ್ಯಾರಿಸ್: ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ 76ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಾರತದ ಕುಸ್ತಿಪಟು ರಿತಿಕಾ ಹೂಡಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಎದುರಾಳಿ ಹಂಗೇರಿಯ ಬರ್ನಾಡೆಟ್ ನ್ಯಾಗಿ ವಿರುದ್ಧ 12-2 ಅಂತರದಲ್ಲಿಯೇ ಬಗ್ಗು ಬಡಿದು, ಅದ್ಭುತ ಪ್ರದರ್ಶನ ನೀಡಿದರು.
ಕ್ವಾರ್ಟರ್ ಪ್ರವೇಶಿಸಿರುವ ರಿತಿಕಾ ಅವರಿಗೆ ಮುಂದಿನ ಹಂತದಲ್ಲಿ ಕಠಿಣ ಪೈಪೋಟಿ ಎದುರಾಗಲಿದೆ. ಈ ಪಂದ್ಯ ಕೂಡ ಇನ್ನು ಕೆಲವೇ ಹೊತ್ತಿನಲ್ಲಿ ನಡೆಯಲಿದೆ.