ಐಪಿಎಲ್ 2024 ಮಾರ್ಚ್ ಅಂತ್ಯದಲ್ಲಿ ಪ್ರಾರಂಭವಾಗಲಿದ್ದು ಮೇ ಕೊನೆಯಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ದೃಢಪಡಿಸಿದ್ದಾರೆ.
ಮೊಟ್ಟ ಮೊದಲ ಬಾರಿಗೆ ದುಬೈನಲ್ಲಿ ಡಿಸೆಂಬರ್ 19ರಂದು ಐಪಿಎಲ್ 2024ರ ಮಿನಿ ಹರಾಜು ನಡೆಯಲಿದೆ. ವಿದೇಶದಲ್ಲಿ ಐಪಿಎಲ್ ಹರಾಜು ನಡೆಯುತ್ತಿರುವುದು ಇದೇ ಮೊದಲು.
ಇದು ಕೊನೆಯ ಮಿನಿ ಹರಾಜು ಆಗಿದ್ದು, ಮುಂದಿನ ವರ್ಷ ಮೆಗಾ ಹರಾಜು ನಡೆಯಲಿದೆ. 10 ಫ್ರಾಂಚೈಸಿಗಳು ಒಟ್ಟು 77 ಸ್ಥಾನಗಳನ್ನು ಭರ್ತಿ ಮಾಡಲು ಈ ಬಾರಿ ಬಿಡ್ ಮಾಡಲಿದ್ದಾರೆ. ಈ ಬಿಡ್‌ನಲ್ಲಿ ಒಟ್ಟು 1166 ಆಟಗಾರರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 30 ಸ್ಥಾನಗಳನ್ನು ವಿದೇಶಿ ಆಟಗಾರರಿಗೆ ಮೀಸಲಿಡಲಾಗಿದೆ.
ಮಹಿಳಾ ಪ್ರೀಮಿಯರ್ ಲೀಗ್ ಮುಂದಿನ ಸೀಸನ್ ಫೆಬ್ರವರಿಯಲ್ಲಿ ಆರಂಭವಾಗಲಿದೆ ಎಂದು ಜಯ್ ಶಾ ಹೇಳಿದ್ದಾರೆ. ಶನಿವಾರ ಮುಂಬೈನಲ್ಲಿ ಡಬ್ಲ್ಯುಪಿಎಲ್ ಹರಾಜು ನಡೆಯಿತು. ಈ ವೇಳೆ, ಈ ಬಾರಿ ಒಂದು ಜಿಲ್ಲೆಯಲ್ಲಿ ಲೀಗ್ ಆಯೋಜಿಸಬಹುದು. ಸ್ಥಳದ ಆಯ್ಕೆಯು ಬಿಸಿಸಿಐ ಮತ್ತು ಫ್ರಾಂಚೈಸಿಗಳ ಜಂಟಿ ನಿರ್ಧಾರವಾಗಿರುತ್ತದೆ ಎಂದು ಶಾ ಹೇಳಿದರು. ಆದಾಗ್ಯೂ, ಭವಿಷ್ಯದಲ್ಲಿ ವಿವಿಧ ನಗರಗಳಲ್ಲಿ WPL ಅನ್ನು ಆಯೋಜಿಸುವ ಆಲೋಚನೆಯನ್ನು ಅವರು ವ್ಯಕ್ತಪಡಿಸಿದ್ದಾರೆ.