Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

WPL-2024: ಎಲಿಮಿನೇಟರ್‌ನಲ್ಲಿ ಆರ್‌ಸಿಬಿಗೆ ಮುಂಬೈ ಸವಾಲು: ಗೆದ್ದ ತಂಡಕ್ಕೆ ಫೈನಲ್‌ ಟಿಕೆಟ್‌

ನವದೆಹಲಿ: ಇಲ್ಲಿನ ಅರುಣ್‌ ಜೆಟ್ಲಿ ಮೈದಾನದಲ್ಲಿ ಇಂದು (ಮಾ.೧೫) ನಡೆಯಲಿರುವ ವುಮೆನ್‌ ಪ್ರೀಮಿಯರ್‌ ಲೀಗ್‌ನ ಎಲಿಮಿನೇಟರ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮತ್ತು ಮುಂಬೈ ಇಂಡಿಯನ್ಸ್‌ (ಎಂಐ) ತಂಡಗಳು ಮುಖಾಮುಖಿಯಾಗಲಿದೆ.

ಗೆದ್ದ ತಂಡ ಮಾ.೧೭ ರ ಭಾನುವಾರದಂದು ಚಾಂಪಿಯನ್‌ ಪಟ್ಟಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್‌ (ಡಿಸಿ) ತಂಡದೊಂದಿಗೆ ಸೆಣೆಸಾಡಲಿದೆ.

ಮೊದಲ ಬಾರಿಗೆ ಈ ಸೀಸನ್‌ನಲ್ಲಿ ಆರ್‌ಸಿಬಿ ಕ್ವಾಲಿಫೈ ಆಗಿದ್ದು, ಚೊಚ್ಚಲ ಟ್ರೋಫಿಗೆ ಮುತ್ತಿಡುವ ಹುಮ್ಮಸ್ಸಿನಲ್ಲಿದೆ. ಇತ್ತ ಮೊದಲ ಸೀಸನ್‌ನಲ್ಲಿಯೇ ಚಾಂಪಿಯನ್‌ ಪಟ್ಟ ಅಲಂಕರಿಸಿರುವ ಮುಂಬೈ ತಂಡ ಈ ಬಾರಿಯೂ ಗೆಲ್ಲುವ ನೆಚ್ಚಿನ ತಂಡವಾಗಿದ್ದು, ಈ ಇಬ್ಬರ ಕಾದಾಟ ಕ್ರೀಡಾಭಿಮಾನಿಗಳಿಗೆ ರಸದೌತಣ ಉಣಬಡಿಸಲಿದೆ.

ಸದ್ಯ ಇತ್ತಂಡಗಳು ಇದುವರೆಗೆ ನಾಲ್ಕು ಬಾರಿ ಮುಖಾಮುಖಿಯಾಗಿದ್ದು, ಅದರಲ್ಲಿ ಮುಂಬೈ ಮೂರು ಬಾರಿ ಗೆದ್ದರೇ, ಆರ್‌ಸಿಬಿ ಕೇವಲ ಒಂದು ಬಾರಿ ಮಾತ್ರ ಗೆದ್ದಿದೆ. ಇವತ್ತಿನ ಪಂದ್ಯ ಗೆದ್ದು, ಮುಂಬೈ ವಿರುದ್ಧ ಅಜೇಯ ಓಟವನ್ನು ಆರ್‌ಸಿಬಿ ಮುಂದುವರೆಸಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನು ಡಬ್ಲ್ಯೂಪಿಎಲ್‌ ಸೀಸನ್‌ 2 ರಲ್ಲಿ ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿ ಒಟ್ಟು 8 ಪಂದ್ಯಗಳನ್ನಾಡಿದ್ದು, ಅದರಲ್ಲಿ ತಲಾ 4 ಗೆಲುವು, 4 ಸೋಲು ಕಂಡು ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದೆ.

ಹರ್ಮನ್‌ಪ್ರೀತ್‌ ಪಡೆ ಲೀಗ್‌ನಲ್ಲಿ 8 ಪಂದ್ಯ ಆಡಿದ್ದು, 5ರಲ್ಲಿ ಗೆಲುವು ಸಾಧಿಸಿ 2ನೇ ಸ್ಥಾನದಲ್ಲಿದೆ. ಉ

ಭಯ ತಂಡಗಳು ಲೀಗ್‌ ಹಂತದಲ್ಲಿ 2 ಬಾರಿ ಮುಖಾಮುಖಿಯಾಗಿದ್ದು, ಮೊದಲ ಪಂದ್ಯದಲ್ಲಿ ಮುಂಬೈ ಗೆದ್ದರೇ, ಎರಡನೇ ಪಂದ್ಯದಲ್ಲಿ ಆರ್‌ಸಬಿ ಗೆದ್ದು ಎಲಿಮಿನೇಟರ್‌ಗೆ ಲಗ್ಗೆಯಿಟ್ಟಿತು.

ಪಂದ್ಯ ಆರಂಭ: ರಾತ್ರಿ 7.30ಕ್ಕೆ,
ನೇರಪ್ರಸಾರ: ಸ್ಪೋರ್ಟ್ಸ್‌ 18, ಜಿಯೋ ಸಿನಿಮಾ

Tags: