Mysore
15
scattered clouds

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ವಿಶ್ವಕಪ್ ಚೆಸ್ ಫೈನಲ್: ಪ್ರಗ್ನಾನಂದ – ಕಾರ್ಲ್‌ಸೆನ್ ನಡುವಿನ 2ನೇ ಪಂದ್ಯವೂ ಡ್ರಾನಲ್ಲಿ ಅಂತ್ಯ!

ಬಾಕು : ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ ಅವರು ಬುಧವಾರ ನಡೆದ ಫಿಡೆ ವಿಶ್ವಕಪ್‌ ಚೆಸ್ ಟೂರ್ನಿಯ ಫೈನಲ್‌ನ ಎರಡನೇ ಕ್ಲಾಸಿಕಲ್ ಪಂದ್ಯದಲ್ಲಿ ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಡ್ರಾ ಮಾಡಿಕೊಂಡಿದ್ದಾರೆ.

ಮೊದಲ ಪಂದ್ಯದಲ್ಲೂ ಡ್ರಾ ಸಾಧಿಸಿದ್ದ ಇಬ್ಬರು ಗ್ರ್ಯಾಂಡ್‌ಮಾಸ್ಟರ್ ಗಳು ಇಂದು ತಮ್ಮ ಆಟವನ್ನು ಮುಂದುವರೆಸಿ 90 ನಿಮಿಷಗಳ ನಂತರ 30 ಚಲನೆಗಳಲ್ಲಿ ಶಾಂತವಾಗಿ ಆಟವಾಡಿ ಡ್ರಾ ಸಾಧಿಸಿದರು.

ಇಂದೂ ಸಹ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದ್ದು, ಗುರುವಾರ ನಡೆಯುವ ಟೈ-ಬ್ರೇಕ್‌ನಲ್ಲಿ ಚಾಂಪಿಯನ್‌ ಯಾರು ಎಂಬುದು ನಿರ್ಧಾರವಾಗಲಿದೆ.

ಕಾರ್ಲ್‌ಸೆನ್ ಅವರು ಬಿಳಿ ಕಾಯಿಗಳೊಂದಿಗೆ ಆಟ ಆರಂಭಿಸಿದರು. ಪ್ರಗ್ನಾನಂದ ಅವರು ಕಪ್ಪು ಕಾಯಿಗಳೊಂದಿಗೆ ಯಾವುದೇ ತೊಂದರೆಗಳನ್ನು ಎದುರಿಸಲಿಲ್ಲ. ಇಬ್ಬರ ಸಮಬಲದ ಹೋರಟದಿಂದಾಗಿ 30 ಚಲನೆಗಳ ಬಳಿಕ ಪಂದ್ಯ ಡ್ರಾ ಎಂದು ಘೋಷಿಸಲಾಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!