Mysore
26
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಇಲ್ಲಿಯವರೆಗೂ ನಡೆದಿರುವ ಎಲ್ಲಾ ವಿಶ್ವಕಪ್‌ಗಳ ವಿನ್ನರ್‌ ಹಾಗೂ ರನ್ನರ್‌ ಅಪ್‌ ತಂಡಗಳ ಪಟ್ಟಿ

ವಿಶ್ವದಾದ್ಯಂತ ಇರುವ ಕ್ರಿಕೆಟ್‌ ಪ್ರೇಮಿಗಳು ಕಾತರತೆಯಿಂದ ಕಾಯುತ್ತಿದ್ದ ದಿನ ಹತ್ತಿರ ಬಂದೇ ಬಿಟ್ಟಿದೆ. ಈ ಬಾರಿಯ ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯ ನಾಳೆ ( ನವೆಂಬರ್‌ 19 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಟೀಮ್‌ ಇಂಡಿಯಾ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.

ಈ ಪಂದ್ಯ ನಾಳೆ ಮಧ್ಯಾಹ್ನ ಎರಡು ಗಂಟೆಗೆ ಶುರುವಾಗಲಿದ್ದು 13ನೇ ವಿಶ್ವಕಪ್‌ ಟ್ರೋಫಿಯನ್ನು ಯಾವ ತಂಡ ಎತ್ತಿ ಹಿಡಿಯಲಿದೆ ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ. ಆಸ್ಟ್ರೇಲಿಯಾ ಆರನೇ ಬಾರಿಗೆ ವಿಶ್ವಕಪ್‌ ಟ್ರೋಫಿಯನ್ನು ಎತ್ತಿ ಹಿಡಿಯುವತ್ತ ಚಿತ್ತ ನೆಟ್ಟಿದ್ದು, ಟೀಮ್‌ ಇಂಡಿಯಾ ಮೂರನೇ ಬಾರಿಗೆ ಚಾಂಪಿಯನ್ ಎನಿಸಿಕೊಳ್ಳುವ ಯೋಜನೆಯಲ್ಲಿದೆ. ಹಾಗಿದ್ದರೆ ಇಲ್ಲಿಯವರೆಗೆ ನಡೆದಿರುವ ಒಟ್ಟು 12 ವಿಶ್ವಕಪ್‌ ಟೂರ್ನಿಯಲ್ಲಿ ಯಾವ ತಂಡಗಳು ಚಾಂಪಿಯನ್‌ ಆಗಿ ಹೊರಹೊಮ್ಮಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

1975 – ಆತಿಥ್ಯ: ಇಂಗ್ಲೆಂಡ್‌, ವಿನ್ನರ್‌: ವೆಸ್ಟ್‌ ಇಂಡೀಸ್‌, ರನ್ನರ್‌ – ಆಸ್ಟ್ರೇಲಿಯಾ

1979- ಆತಿಥ್ಯ: ಇಂಗ್ಲೆಂಡ್‌, ವಿನ್ನರ್‌: ವೆಸ್ಟ್‌ ಇಂಡೀಸ್‌, ರನ್ನರ್‌ – ಇಂಗ್ಲೆಂಡ್‌

1983 – ಆತಿಥ್ಯ – ಇಂಗ್ಲೆಂಡ್‌, ವಿನ್ನರ್‌ – ಭಾರತ, ರನ್ನರ್‌ – ವೆಸ್ಟ್‌ ಇಂಡೀಸ್‌

1987 – ಆತಿಥ್ಯ – ಭಾರತ ಹಾಗೂ ಪಾಕಿಸ್ತಾನ, ವಿನ್ನರ್‌ – ಆಸ್ಟ್ರೇಲಿಯಾ, ರನ್ನರ್‌ – ಇಂಗ್ಲೆಂಡ್‌

1992 – ಆತಿಥ್ಯ – ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯಾ, ವಿನ್ನರ್‌ – ಪಾಕಿಸ್ತಾನ, ರನ್ನರ್‌ – ಇಂಗ್ಲೆಂಡ್‌

1996 – ಆತಿಥ್ಯ – ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾ, ವಿನ್ನರ್‌ – ಶ್ರೀಲಂಕಾ, ರನ್ನರ್‌ – ಆಸ್ಟ್ರೇಲಿಯಾ

1999 – ಆತಿಥ್ಯ – ಇಂಗ್ಲೆಂಡ್‌, ವಿನ್ನರ್‌ – ಆಸ್ಟ್ರೇಲಿಯಾ, ರನ್ನರ್‌ – ಪಾಕಿಸ್ತಾನ

2003 – ಆತಿಥ್ಯ – ದಕ್ಷಿಣ ಆಫ್ರಿಕಾ, ವಿನ್ನರ್‌ – ಆಸ್ಟ್ರೇಲಿಯಾ, ರನ್ನರ್‌ – ಭಾರತ

2007 – ಆತಿಥ್ಯ – ವೆಸ್ಟ್‌ ಇಂಡೀಸ್‌, ವಿನ್ನರ್‌ – ಆಸ್ಟ್ರೇಲಿಯಾ, ರನ್ನರ್‌ – ಶ್ರೀಲಂಕಾ

2011 – ಆತಿಥ್ಯ – ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ವಿನ್ನರ್‌ – ಭಾರತ, ರನ್ನರ್‌ – ಶ್ರೀಲಂಕಾ

2015 – ಆತಿಥ್ಯ – ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ವಿನ್ನರ್‌ – ಆಸ್ಟ್ರೇಲಿಯಾ, ರನ್ನರ್‌ – ನ್ಯೂಜಿಲೆಂಡ್‌

2019 – ಆತಿಥ್ಯ – ಇಂಗ್ಲೆಂಡ್ಸ್‌ ಹಾಗೂ ವೇಲ್ಸ್‌, ವಿನ್ನರ್‌ – ಇಂಗ್ಲೆಂಡ್‌, ರನ್ನರ್‌ – ನ್ಯೂಜಿಲೆಂಡ್‌

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ