Mysore
21
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ವಿಶ್ವ ಚಾಂಪಿಯನ್‌ಶಿಪ್‌ : ಮೀರಾಬಾಯಿ ಚಾನುವಿಗೆ ಬೆಳ್ಳಿ

ಬೊಗೊಟಾ: ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ, ಭಾರತದ ಹೆಮ್ಮೆಯ ಮೀರಾಬಾಯಿ ಚಾನು, ಕೊಲಂಬಿಯಾದಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ ನಲ್ಲೂ ಬೆಳ್ಳಿ ಪದಕ ಗೆದ್ದ ಜಯಿಸಿದ್ದಾರೆ. 

49 ಕೆ.ಜಿ. ವಿಭಾಗದಲ್ಲಿ ಒಟ್ಟು 200 ಕೆ.ಜಿ ಭಾರ ಎತ್ತಿದ ಮೀರಾಬಾಯಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.

ಸ್ನ್ಯಾಚ್ ವಿಭಾಗದಲ್ಲಿ 87 ಕೆ.ಜಿ ಮತ್ತು ಕ್ಲೀನ್ ಆ್ಯಂಡ್ ಜೆರ್ಕ್ ವಿಭಾಗದಲ್ಲಿ ಮೀರಾಬಾಯಿ 113 ಕೆ.ಜಿ ಭಾರ ಎತ್ತುವಲ್ಲಿ ಯಶಸ್ವಿಯಾದರು.

ಈ ವಿಭಾಗದಲ್ಲಿ ಒಟ್ಟು 206 ಕೆ.ಜಿ ಭಾರ ಎತ್ತಿದ (93 ಕೆ.ಜಿ+113 ಕೆ.ಜಿ) ಚೀನಾದ ಜಿಯಾಂಗ್ ಹುಯಿಹುವಾ, ಚಿನ್ನದ ಪದಕ ಜಯಿಸಿದರು. ಟೋಕಿಯೊ ಒಲಿಂಪಿಕ್ ಚಾಂಪಿಯನ್ ಚೀನಾದವರೇ ಆದ ಹೋವ್ ಝಿಹು ಕಂಚಿನ ಪದಕ ( ಒಟ್ಟು 198 ಕೆ.ಜಿ) ಗೆದ್ದರು.

ಮಣಿಕಟ್ಟಿನ ಗಾಯದ ಸಮಸ್ಯೆಯ ಹೊರತಾಗಿಯೂ ಪ್ರಭಾವಿ ಪ್ರದರ್ಶನ ನೀಡುವಲ್ಲಿ ಮೀರಾ ಯಶಸ್ವಿಯಾದರು. ಸೆಪ್ಟೆಂಬರ್ ತಿಂಗಳಲ್ಲಿ ಗಾಯದ ಸಮಸ್ಯೆಗೆ ಒಳಗಾಗಿದ್ದರೂ ಮೀರಾ, ಅಕ್ಟೋಬರ್‌ನಲ್ಲಿ ನಡೆದ ನ್ಯಾಷನಲ್ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದರು.

2017ರ ಚಾಂಪಿಯನ್ ಮಿರಾಬಾಯಿ ಈಗ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಬಾರಿ ಪದಕ ಜಯಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!