ಚೆನ್ನೈ: ಭಾರತದ ಗ್ರ್ಯಾಂಡ್ ಮಾಸ್ಟರ್ ಗುಕೇಶ್ ಅವರು ವಿಶ್ವ ಚೆಸ್ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡು ಇಂದು ತವರಿಗೆ ಮರಳಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣದ ಬಳಿ ಗುಕೇಶ್ ಅವರನ್ನು ಅಭಿಮಾನಿಗಳು ಹಾಗೂ ಸ್ನೇಹಿತರು ಸೇರಿದಂತೆ ರಾಜ್ಯ ಸರ್ಕಾರದ ಅಧಿಕಾರಿಗಳು ಗುಕೇಶ್ ಅವರಿಗೆ ಹೂವಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತ ಕೋರಿದರು.
ಈ ವೇಳೆ ಮಾಧ್ಯಮದವರೊಂದಿಗೆ ಖುಷಿ ಹಂಚಿಕೊಂಡ ಗುಕೇಶ್ ಅವರು, ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಬೆಂಬಲ ಹಾಗೂ ಪ್ರೀತಿಯೇ ನನಗೆ ಹೆಚ್ಚಿನ ಶಕ್ತಿ ನೀಡಿತ್ತು ಎಂದು ಸಂತಸ ವ್ಯಕ್ತಪಡಿಸಿದರು.
18 ವರ್ಷ ವಯಸ್ಸಿನ ಗುಕೇಶ್ ಅವರು, ಗುರುವಾರ ನಡೆದ ಚಾಂಪಿಯನ್ ಷಿಪ್ ಪೈನಲ್‌ನ 14ನೇ ಹಾಗೂ ಅಂತಿಮ ಸುತ್ತಿನ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿದರು. ಈ ಹಿನ್ನೆಲೆಯಲ್ಲಿ 21 ಕೋಟಿ ರೂ ಬಹುಮಾನ ಮೊತ್ತದಲ್ಲಿ ಬಹುಪಾಲನ್ನು ಗುಕೇಶ್ ಪಡೆಯಲಿದ್ದಾರೆ.