Mysore
18
overcast clouds

Social Media

ಗುರುವಾರ, 08 ಜನವರಿ 2026
Light
Dark

ವಿಮಾನದಲ್ಲಿ ಅಸ್ವಸ್ಥಗೊಂಡ ಮಯಾಂಕ್‌ ಪಾರಾಗಿದ್ದು ಹೇಗೆ? ಪೊಲೀಸ್‌ ದೂರು ದಾಖಲಿಸಿದ ಕ್ರಿಕೆಟಿಗ

ನಿನ್ನೆ ( ಜನವರಿ 30 ) ಅಗರ್ತಲದಿಂದ ಗುಜರಾತ್‌ನ ಸೂರತ್‌ಗೆ ತೆರಳಲು ವಿಮಾನ ಏರಿದ್ದ ಕ್ರಿಕೆಟಿಗ ಮಯಾಂಕ್‌ ಅಗರ್ವಾಲ್‌ ನೀರು ಸೇವನೆಯಿಂದ ಅಸ್ವಸ್ಥಗೊಂಡಿದ್ದರು. ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಗೆ ಒಳಪಟ್ಟಿದ್ದ ಮಯಾಂಕ್ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಮ್ಯಾನೇಜರ್‌ ಮೂಲಕ ಎನ್‌ಸಿಸಿಪಿಎಸ್‌ ಠಾಣೆಯಲ್ಲಿ ಪೊಲೀಸ್‌ ದೂರನ್ನು ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಮಯಾಂಕ್‌ ಅಗರ್ವಾಲ್‌ ಅಪಾಯದಿಂದ ಪಾರಾಗಿದ್ದು ಎರಡರಿಂದ ಮೂರು ದಿನಗಳ ಕಾಲ ಮಾತನಾಡಲಾಗುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ ಮುಂದಿನ ಒಂದು ಪಂದ್ಯವನ್ನು ಮಯಾಂಕ್‌ ಆಡುವುದು ಅನುಮಾನವಾಗಿದೆ.

ಏನಿದು ಪ್ರಕರಣ?

ತ್ರಿಪುರ ವಿರುದ್ಧದ ಪಂದ್ಯದಲ್ಲಿ ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ್ದ ಮಯಾಂಕ್‌ ಅಗರ್ವಾಲ್‌ ಫೆಬ್ರವರಿ 2ರಿಂದ ಆರಂಭವಾಗಲಿರುವ ರೈಲ್ವೆ ವಿರುದ್ಧ ಮುಂದಿನ ಪಂದ್ಯವನ್ನು ಆಡಲು ಗುಜರಾತ್‌ನ ಸೂರತ್‌ಗೆ ವಿಮಾನದಲ್ಲಿ ನಿನ್ನೆ ( ಜನವರಿ 30 ) ಪ್ರಯಾಣ ಕೈಗೊಂಡಿದ್ದರು.

ಈ ವೇಳೆ ಮಯಾಂಕ್‌ ಅಗರ್ವಾಲ್‌ ತಮ್ಮ ಸೀಟಿನ ಮುಂಭಾಗ ಇದ್ದ ಬಾಟಲ್‌ನಲ್ಲಿದ್ದ ನೀರನ್ನು ಕುಡಿದಿದ್ದರು. ಕೂಡಲೇ ನಾಲಿಗೆ, ಬಾಯಿ ಹಾಗೂ ಕೆನ್ನೆ ಸುಟ್ಟು ಹೋದ ಅನುಭವವಾದ ಮಯಾಂಕ್‌ ಅಗರ್ವಾಲ್‌ ಅವರನ್ನು ಅಗರ್ತಲದ ಎಎಲ್‌ಎಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇನ್ನು ಮಯಾಂಕ್‌ ಅಗರ್ವಾಲ್‌ ಕುಡಿದಿದ್ದ ಬಾಟಲ್‌ನಲ್ಲಿ ಇದ್ದದ್ದು ನೀರಲ್ಲ ಆಸಿಡ್‌ ಎಂಬ ಅನುಮಾನಗಳೂ ಸಹ ವ್ಯಕ್ತವಾಗಿದ್ದವು.

ಘಟನೆ ವಿವರಿಸಿದ ಮ್ಯಾನೇಜರ್‌

“ವಿಮಾನ ಹತ್ತಿ ಹೊರಡುವ ಮುನ್ನ ಮಯಾಂಕ್‌ಗೆ ಬಾಯಾರಿಕೆಯಾಯಿತು. ಹಾಗಾಗಿ ಮುಂದಿನ ಸೀಟ್ ಪಾಕೆಟ್ ಹಿಂದೆ ಇಟ್ಟಿದ್ದ ನೀರು ಕುಡಿದರು. ಕೆಲವು ನಿಮಿಷಗಳ ನಂತರ ಗಂಟಲು ತುರಿಕೆಯಾಗುತ್ತಿದೆ, ವಾಂತಿ ಬರುವ ಹಾಗೆ ಆಗುತ್ತಿದೆ ಎಂದು ಹೇಳಿ ವಾಷ್‌ರೂಮ್‌ ಕಡೆ ಓಡಿ ಹೋದರು ಹಾಗೂ ಗಗನಸಖಿಯರಿಗೆ ಈ ಕುರಿತು ವಿಷಯ ತಿಳಿಸಿದರು. ಬಳಿಕ ವಿಮಾನದಲ್ಲಿ ವೈದ್ಯರು ಇದ್ದಾರಾ ಎಂದು ಗಗನಸಖಿಯರು ತುರ್ತು ಕರೆ ನೀಡಿ ವಿಚಾರಿಸಿದರು. ದುರಾದೃಷ್ಟವಷಾತ್‌ ವಿಮಾನದಲ್ಲಿ ವೈದ್ಯರಿಲ್ಲದ ಕಾರಣ ನಿಲ್ದಾಣ ಆಡಳಿತಕ್ಕೆ ಮಾಹಿತಿ ನೀಡಲಾಯಿತು. ಬಳಿಕ ಬಂದ ವೈದ್ಯರು ಮಯಾಂಕ್‌ ಪರಿಸ್ಥಿತಿ ನೋಡಿ ಇಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗುವುದಿಲ್ಲ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಬೇಕು ಎಂದು ಹೇಳಿದರು. ನಂತರ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಂಡು ಆಸ್ಪತ್ರೆಗೆ ಕರೆದೊಯ್ದೆವು” ಎಂದು ಕರ್ನಾಟಕ ತಂಡದ ಮ್ಯಾನೇಜರ್‌ ಇಂಡಿಯಾ ಟುಡೇ ಜತೆ ಮಾತನಾಡಿ ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!