Mysore
23
broken clouds

Social Media

ಸೋಮವಾರ, 30 ಡಿಸೆಂಬರ್ 2024
Light
Dark

ಸಿರಾಜ್‌ ಬೌಲಿಂಗ್‌ಗೆ ವಿಂಡೀಸ್‌ ತತ್ತರ : ಮೊದಲ ಇನ್ನಿಂಗ್ಸ್‌ನಲ್ಲಿ  255ಕ್ಕೆ ಆಲೌಟ್‌

ಪೋರ್ಟ್ ಆಫ್ ಸ್ಪೇನ್: ಐದು ವಿಕೆಟ್ ಕಬಳಿಸಿದ ಮೊಹಮ್ಮದ್ ಸಿರಾಜ್ ದಾಳಿಗೆ ಸಿಲುಕಿದ ಅತಿಥೇಯ ವೆಸ್ಟ್‌ ಇಂಡೀಸ್ ಇಲ್ಲಿ ನಡೆಯುತ್ತಿರುವ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 115.4 ಓವರ್‌ಗಳಲ್ಲಿ 255 ರನ್‌ಗಳಿಗೆ ಆಲೌಟ್ ಆಗಿದೆ.

ಇದರೊಂದಿಗೆ ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 183 ರನ್‌ಗಳ ಮಹತ್ವದ ಮುನ್ನಡೆ ಗಳಿಸಿದೆ.

ಮೂರನೇ ದಿನದ ಅಂತ್ಯಕ್ಕೆ ವೆಸ್ಟ್ ಇಂಡೀಸ್ ಐದು ವಿಕೆಟ್ ನಷ್ಟಕ್ಕೆ 229 ರನ್ ಗಳಿಸಿತ್ತು. ಇಂದು ದಿಢೀರ್ ಪತನ ಕಂಡಿಲ್ಲತೆ ಉಳಿದ ಐದು ವಿಕೆಟ್‌ಗಳನ್ನು 26 ರನ್ ಅಂತರದಲ್ಲಿ ಕಳೆದುಕೊಂಡಿತು.

ಟೆಸ್ಟ್‌ ಕ್ರಿಕೆಟ್‌ನ ಇನಿಂಗ್ಸ್‌ ವೊಂದರಲ್ಲಿ ಜೀವನಶ್ರೇಷ್ಠ ಬೌಲಿಂಗ್‌ ಸಾಧನೆ ಮಾಡಿರುವ ಸಿರಾಜ್ 60 ರನ್ ನೀಡಿ ಐದು ವಿಕೆಟ್ ಕಿತ್ತು ಮಿಂಚಿದರು. ಚೊಚ್ಚಲ ಪಂದ್ಯ ಆಡುತ್ತಿರುವ ಮುಕೇಶ್ ಕುಮಾರ್ ಮತ್ತು ರವೀಂದ್ರ ಜಡೇಜ ತಲಾ ಎರಡು ವಿಕೆಟ್‌ ಕಬಳಿಸಿದರು.

ರೋಹಿತ್ 35 ಎಸೆತಗಳಲ್ಲಿ ಅರ್ಧಶತಕ 

ಬಳಿಕ ಎರಡನೇ ಇನಿಂಗ್ಸ್ ಆರಂಭಿಸಿರುವ ಭಾರತಕ್ಕೆ ನಾಯಕ ರೋಹಿತ್‌ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್‌ ಬಿರುಸಿನ ಆರಂಭವೊದಗಿಸಿದ್ದಾರೆ. ತಾಜಾ ವರದಿಯ ವೇಳೆಗೆ 12 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 98 ರನ್ ಗಳಿಸಿದೆ. ಈ ಮೂಲಕ ಒಟ್ಟು 275 ರನ್‌ಗಳ ಮುನ್ನಡೆ ಗಳಿಸಿದೆ. ನಾಯಕ ರೋಹಿತ್‌ ಶರ್ಮಾ ಕೇವಲ 35 ಎಸೆತಗಳಲ್ಲಿ ಅಜೇಯ ಅರ್ಧಶತಕ ಗಳಿಸಿ ಗೆಬ್ರಿಯಲ್‌ ಗೆ ವಿಕೆಟ್‌ ಒಪ್ಪಿಸಿದರು. ಜೈಸ್ವಾಲ್ 32 ರನ್ ಗಳಿಸಿದ್ದು ಕ್ರೀಸಿನಲ್ಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ