ನವದೆಹಲಿ: ಇದೇ ಅಕ್ಟೊಬರ್ 3 ರಿಂದ 20ರ ವರೆಗೆ ನಡೆಯಲಿರುವ ಮಹಿಳಾ ಟಿ20 ಕ್ರಿಕೆಟ್ ಟೂರ್ನಿ ಬಾಂಗ್ಲಾದೇಶದಲ್ಲಿ ಆಯೋಜಿಸಲು ಚಿಂತನೆ ನಡೆಸಲಾಗಿತ್ತು. ಆದರೆ, ಬಾಂಗ್ಲಾದಲ್ಲಿನ ಉಧ್ವಿಘ್ನತೆ ಇದಕ್ಕೆ ಅಡ್ಡಿಯಾದ್ದರಿಂದ ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ಆತಿಥ್ಯವನ್ನು ವಹಿಸುವಂತೆ ಭಾರತಕ್ಕೆ ಐಸಿಸಿ ತಿಳಿಸಿತ್ತು ಆದರೆ ಈ ಮನವಿಯನ್ನು ನಿರಾಕರಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಜಯ್ ಶಾ, ಐಸಿಸಿಯು ವುಮೆನ್ಸ್ ವಿಶ್ವಕಪ್ ಟೋರ್ನಿ ಆಯೋಜಿಸುತ್ತಿರಾ ಎಂದು ನಮ್ಮನು ಕೇಳಿತ್ತು ಅದನ್ನು ನಾವು ನಿರಾಕರಿಸಿದ್ದೇವೆ, ನಾವು ಆಯೋಜಿಸುವುದಿಲ್ಲ ಎಂದು ಹೇಳಿದ್ದೇವೆ ಎಂದು ತಿಳಿಸಿದರು.
ಇನ್ನು, ಇದೀಗಾ ಭಾರತದಲ್ಲಿ ಮುಂಗಾರು ಮಳೆಯಾಗುತ್ತಿದೆ ಮತ್ತು ನಾವು ಮುಂದಿನ ವರ್ಷ ಮಹಿಳಾ ಏಕದಿನ ವಿಶ್ವಕಪ್ ಆಯೋಜಿಸುತ್ತೇವೆ ಸತತ ವಿಶ್ವಕಪ್‌ಗಳನ್ನು ಆಯೋಜಿಸಲು ನಾವು ಇಚ್ಚಿಸುವುದಿಲ್ಲ ಎಂದಿದ್ದಾರೆ.
ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರನ್ನು ಪದಚ್ಯುತಿಗೊಳಿಸಿದ ನಂತರ ಬಾಂಗ್ಲಾದೇಶದಲ್ಲಿ ಹೆಚ್ಚಿನ ಹಿಂಸಾಚಾರ ಕಂಡುಬಂದಿದ್ದು ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಭಾರತ ಬಾಂಗ್ಲಾದೇಶಕ್ಕೆ ಪ್ರಯಾಣಿಸದಂತೆ ಸಲಹೆಗಳನ್ನು ನೀಡಿವೆ.
ಮತ್ತೊಂದೆಡೆ ಬಾಂಗ್ಲಾದೇಶ ಟೆಸ್ಟ್ ತಂಡವು ಪ್ರಸ್ತುತ ಪಾಕಿಸ್ತಾನದಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ತಯಾರಿ ನಡೆಸುತ್ತಿದೆ, ತವರಿನಲ್ಲಿ ಹಿಂಸಾಚಾರವು ಆಟಗಾರರ ತಯಾರಿಗೆ ತೊಂದರೆ ಉಂಟು ಮಾಡುತ್ತಿದೆ.