Mysore
17
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಸುಂದರ್‌ ಜೊತೆ ಗುದ್ದಲು ಮುಂದಾದ ರೋಹಿತ್‌: ವೈರಲ್‌ ಆಯ್ತು ವಿಡಿಯೋ

ಕೊಲಂಬೊ: ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಏಕದಿನ ಪಂದ್ಯದ ವೇಳೆ ರೋಹಿತ್‌ ಶರ್ಮಾ ವಾಷಿಂಗ್‌ಟನ್‌ ಸುಂದರ್‌ಗೆ ಒಡೆಯಲು ಮುಂದಾಗಿದ್ದಾರೆ.

ಒಂದಿಲ್ಲೊಂದು ವಿಚಾರದಲ್ಲಿ ಸದಾ ಸುದ್ದಿಯಾಗುವ ಟೀಂ ಇಂಡಿಯಾ ಕಪ್ತಾನ್‌ ರೋಹಿತ್‌ ಶರ್ಮಾ, ಇದೀಗ ಭಾರೀ ವೈರಲ್‌ ಆಗಿದ್ದಾರೆ.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಶ್ರೀಲಂಕಾ ವಿರುದ್ಧ 33ನೇ ಓವರ್‌ ಎಸೆಯಲು ಬಂದ ವಾಷಿಂಗ್‌ಟನ್‌ ಸುಂದರ್‌ ಅವರು ರನ್‌ ಅಪ್‌ ಮಾಡುವಾಗಿ ಎಡವಿದರು. ಅವರು ಬರೋಬ್ಬರಿ ಮೂರು ಬಾರಿ ರನ್‌ಅಪ್‌ ನಲ್ಲಿ ಎಡವಿದರು.

ಸ್ಲಿಪ್‌ನಲ್ಲಿ ನಿಂತಿದ್ದ ರೋಹಿತ್‌ ಶರ್ಮಾ ಇದರಿಂದ ಕೋಪಗೊಂಡು ವಾಷಿಂಗ್‌ಟನ್‌ ಗೆ ಒಡೆಯಲು ಓಡೋಡಿ ಬರುತ್ತಿದ್ದರು.

ತಮಾಷೆಯಾಗಿ ಸುಂದರ್‌ಗೆ ಒಡೆಯುವ ರೀತಿಯಲ್ಲಿ ಬರುತ್ತಿದ್ದ ರೋಹಿತ್‌ರನ್ನು ನೋಡಿದ ಆಟಗಾರರು ನಕ್ಕರು. ಮತ್ತೆ ಬೌಲಿಂಗ್‌ ಮಾಡಲು ಮುಂದಾದ ಸುಂದರ್‌ ನಗುತ್ತಾ ಮುಂದೆ ಸಾಗಿದರು.

ಈ ವೀಡಿಯೋ ಈಗ ಸಖತ್‌ ವೈರಲ್‌ ಆಗಿದ್ದು, ರೋಹಿತ್‌ ಅವರ ತಮಾಷಾದಾಯಕ ನಡೆಗೆ ಎಲ್ಲೆಡೆ ವ್ಯಾಪಕವಾಗಿ ಪ್ರಶಂಸೆ ವ್ಯಕ್ತವಾಗುತ್ತಿದೆ.

https://x.com/SonySportsNetwk/status/1820062307323387969

Tags:
error: Content is protected !!