Mysore
30
few clouds

Social Media

ಬುಧವಾರ, 11 ಮಾರ್ಚ್ 2026
Light
Dark

ವಿಶ್ವನಾಥ್‌ ಆನಂದ್‌ ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದ ಆರ್. ಪ್ರಜ್ಞಾನಂದ

ನೆದರ್‌ಲ್ಯಾಂಡ್ಸ್: ವಿಶ್ವ ಚೆಸ್ ಚಾಂಪಿಯನ್ ಡಿಂಗ್ ಲಿರೇನ್ ಅವರನ್ನು ಸೋಲಿಸಿದ ಆರ್. ಪ್ರಜ್ಞಾನಂದ ಅವರು, ಭಾರತದ ಗ್ರಾಂಡ್ ಮಾಸ್ಟರ್ ವಿಶ್ವನಾಥ್ ಆನಂದ್ ಅವರನ್ನು ಹಿಂದಿಕ್ಕಿ ಫಿಡಿ ಲೈವ್ ರೇಟಿಂಗ್‌ಗಳಲ್ಲಿ ನಂ.1 ಚೆಸ್‌ ಚಾಂಪಿಯನ್ ಪಟ್ಟಕ್ಕೇರಿದ್ದಾರೆ.

ವಿಶ್ವನಾಥನ್ ಆನಂದ್ ಅವರು 2,748 ಪಾಯಿಂಟ್ ಗಳಿಸಿ ವಿಶ್ವ ಚಾಂಪಿಯನ್ ಆಗಿದ್ದರು. ಇದೀಗ ಪ್ರಜ್ಞಾನಂದ ಅವರು 2,748.3 ಪಾಯಿಂಟ್ ಗಳಿಸಿದ್ದಾರೆ.

18 ವರ್ಷದ ಪ್ರಜ್ಞಾನಂದ FIDE ಲೈವ್ ರೇಟಿಂಗ್‌ಗಳಲ್ಲಿ ಐದು ಬಾರಿಯ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿದ್ದಾರೆ.

ನೆದರ್‌ಲೆಂಡ್‌ನ ವಿಜ್ ಆನ್ ಝೀನಲ್ಲಿ ನಡೆದ ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್‌ನಲ್ಲಿ ಪ್ರಜ್ಞಾನಂದ ಅವರು ಈ ದಾಖಲೆ ನಿರ್ಮಿಸಿದ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಪ್ರಜ್ಞಾನಂದ ಅವರು ವಿಶ್ವನಾಥನ್ ಆನಂದ್ ನಂತರ ಚೆಸ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್‌ನನ್ನು ಸೋಲಿಸಿದ ಎರಡನೇ ಭಾರತೀಯ ಎಂಬ ದಾಖಲೆಗೆ ಆರ್. ಪ್ರಜ್ಞಾನಂದ ಭಾಜನರಾಗಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!