Mysore
34
overcast clouds

Social Media

ಶನಿವಾರ, 18 ಏಪ್ರಿಲ 2026
Light
Dark

ವಿನೇಶ್‌ ಫೋಗಟ್‌; ಭಾರತೀಯರ ಮನದಲ್ಲಿ ಚಿನ್ನ ಗೆದ್ದಾಗಿದೆ

ನವದೆಹಲಿ: ಒಲಿಂಪಿಕ್‌ನಲ್ಲಿ ಭಾರತಕ್ಕೆ ಚಿನ್ನದ ಭರವಸೆ ಮೂಡಿಸಿದ್ದ ಕುಸ್ತಿಪಟು ವಿನೇಶ್ ಫೋಗಟ್ ಅವರು ಅನರ್ಹಗೊಂಡಿದ್ದಾರೆ.  ಇದು ದೇಶದ್ಯಾಂತ ಚರ್ಚೆಯಾಗುತ್ತಿದ್ದು,  ವಿನೇಸ್‌ ಫೋಗಟ್  ಅನರ್ಹರಾಗಿದ್ದರೂ ಕೋಟ್ಯಂತರ ಭಾರತೀಯರ ಮನದಲ್ಲಿ ಈಗಾಗಲೇ ಚಿನ್ನ ಗೆದ್ದಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ನಡೆಯುತ್ತಿದೆ.

ವಿನೇಸ್‌ ಅವರನ್ನು ಅನರ್ಹಗೊಳಿಸಿರುವುದಕ್ಕೆ ಪ್ರಬಲ ಪ್ರತಿಭಟನೆ ಸಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಒಲಿಂಪಿಕ್ ಸಂಸ್ಥೆಗೆ ಒತ್ತಾಯಿಸಿದ್ದಾರೆ.  ಭಾರತೀಯ ಒಲಿಂಪಿಕ್ಸ್‌ ಅಸೋಸಿಯೇಷನ್‌ ಅಧ್ಯಕ್ಷೆ ಪಿ.ಟಿ.ಉಷಾ ಅವರೊಂದಿಗೆ ಮಾತನಾಡಿರುವ ಮೋದಿ, ಎಲ್ಲಾ ರೀತಿಯಲ್ಲಿ ಸಹಾಯ ಮಾಡಲು ಸಂಪೂರ್ಣ ಶ್ರೇಣಿಯ ಆಯ್ಕೆಗಳನ್ನು ತೆಗದುಕೊಳ್ಳಲು ಹೇಳಿದ್ದಾರೆ.

ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ನಿನ್ನೆ ಮೂರು ಪಂದ್ಯಗಳನ್ನು ಗೆದ್ದು ಫೈನಲ್ ಪ್ರವೇಶಿಸಿದ್ದರು. ಇಂದು ಅಮೆರಿಕದ ಹಿಲ್ಡೆಬ್ರಾಂಡ್ ಸಾರಾ ಆನ್ ರೊಂದಿಗೆ ಅಂತಿಮ ಪಂದ್ಯಾವಳಿಯಲ್ಲಿ ಸ್ಪರ್ಧಿಸುವ ಮುನ್ನ ದೇಹತೂಕ ಹೆಚ್ಚಾದ ಕಾರಣಕ್ಕೆ ಅನರ್ಹಗೊಂಡಿದ್ದಾರೆ. ಇದನ್ನು ಬಲವಾಗಿ ವಿರೋಧಿಸುವಂತೆ ಪ್ರಧಾನಮಂತ್ರಿ ಪಿ.ಟಿ.ಉಷಾ ಅವರಿಗೆ ಸೂಚಿಸಿದ್ದಾರೆ.

ವಿಶ್ವ ಕುಸ್ತಿ ಸಂಸ್ಥೆ ನಿರ್ಧಾರಕ್ಕೆ ತೀವ್ರವಾದ ಆಕ್ಷೇಪವನ್ನು ದಾಖಲಿಸಬೇಕು. ವಿನೇಶ್ ಫೋಗಟ್‍ರವರಿಗೆ ಅಗತ್ಯವಾದ ಕಾನೂನಿನ ನೆರವು ನೀಡಬೇಕೆಂದು ಸೂಚಿಸಿರುವುದಲ್ಲದೆ, ಭಾರತೀಯ ಕ್ರೀಡಾಪಟುಗಳಿಗೆ ಎಲ್ಲಾ ರೀತಿಯ ಸಹಾಯ ನೀಡಿ ವಿನೇಶ್ ಫೋಗಟ್ ಪ್ರಕರಣದಲ್ಲಿ ಖುದ್ದಾಗಿ ಕಾಳಜಿ ತೆಗೆದುಕೊಳ್ಳಿ ಎಂದು ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Tags:
error: Content is protected !!