ಪ್ಯಾರಿಸ್: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ವಿಶ್ವ ವಿಖ್ಯಾತ ಕ್ರೀಡಾಕೂಟ ಒಲಂಪಿಕ್ಸ್‌ನ ಮಹಿಳೆಯರ ಕುಸ್ತಿ ಪಂದ್ಯಾವಳಿಯಲ್ಲಿನ 50 ಕೆಜಿ ವಿಭಾಗದಿಂದ ಭಾರತ ಪರವಾಗಿ ಸ್ಪರ್ಧೆ ಮಾಡಿದ್ದ ವಿನೇಶ್ ಫೋಗಾಟ್ ಅವರು ಫೈನಲ್ಸ್ ಪ್ರವೇಶಿಸಿದ್ದಾರೆ. ಆ ಮೂಲಕ ಭಾರತಕ್ಕೆ ಒಂದು ಪಕದವನ್ನು ಖಚಿತಪಡಿಸಿದ್ದಾರೆ.
ಇನ್ನು ಫೈನಲ್ಸ್ ಪಂದ್ಯದಲ್ಲಿ ಫೋಗಾಟ್ ಅವರು ಚಿನ್ನ ಗೆದ್ದದ್ದೇ ಆದಲ್ಲಿ, ಭಾರತ ಪರವಾಗಿ ಕುಸ್ತಿಯಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ವಿಶ್ವದಾಖಲೆ ಫೋಗಾಟ್ ಪಾಲಾಗಲಿದೆ.
ಮಂಗಳವಾರ ನಡೆದ ಸೆಮಿ ಫೈನಲ್ಸ್‌ನಲ್ಲಿ ಕ್ಯೂಬಾದ ಯುಸ್ನಿಲಿಸ್ ಗುಜ್ಮಾನ್ ವಿರುದ್ಧ ಪ್ರಾಬಲ್ಯ ಮೆರೆದ ವಿನೀಶ್ ಫೋಗಾಟ್ 5-0 ಅಂತರಗಳಿಂದ ಗೆದ್ದು ಬೀಗುವ ಮೂಲಕ ಫೈನಲ್ಸ್ ತಲುಪಿದರು.
ಇನ್ನು ಉಕ್ರೇನ್‌ನ ಒಸ್ಕಾನ ವಿವಚ್ ವಿರುದ್ಧ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ 7-5 ಅಂಗಳನ್ನು ಗಳಿಸುವ ಮೂಲಕ ಗೆಲುವು ಸಾಧಿಸಿ ಸೆಮಿಸ್‌ಗೆ ಅರ್ಹತೆ ಪಡೆದುಕೊಂಡರು.
ಈ ಪಂದ್ಯಕ್ಕೂ ಮೊದಲು ನಡೆದ ಎಲಿಮಿನೆಟರ್ ಸುತ್ತಿನಲ್ಲಿ ನಾಲ್ಕುಬಾರಿ ವಿಶ್ವ ಚಾಂಪಿಯನ್ ಜಪಾನಿನ ಯುಇ ಸುಸಾಕಿ ಅವರನ್ನು 3-2ರ ಅಂತರದಿಂದ ಸೋಲಿಸಿದ ವಿನೇಶಾ ಫೋಗಾಟ್ ಕ್ವಾರ್ಟರ್‌ಗೆ ಅರ್ಹತೆ ಪಡೆದಿದ್ದರು.
ನಾಳೆ ನಡೆಯಲಿರುವ ಫೈನಲ್ಸ್ ಪಂದ್ಯದಲ್ಲಿ ಫೋಗಾಟ್ ಅವರು ಅಮೇರಿಕಾದ ಸಾರಾ ಆನ್ ಹಿಲ್ಡೆಬ್ರಾಂಡ್ಟ್ ಅವರ ವಿರುದ್ಧ ಚಿನ್ನಕ್ಕಾಗಿ ಸೆಣೆಸಾಡಲಿದ್ದಾರೆ.





