ಸದ್ಯ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿಯ ರೌಂಡ್ 3 ಪಂದ್ಯಗಳು ನಿನ್ನೆ ( ನವೆಂಬರ್ 27 ) ಮುಕ್ತಾಯಗೊಂಡಿವೆ. ಇನ್ನು ಕರ್ನಾಟಕ ತಂಡ ರೌಂಡ್ 3 ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆಲುವು ಸಾಧಿಸುವುದರ ಮೂಲಕ ಟೂರ್ನಿಯಲ್ಲಿ ಸತತ ಮೂರನೇ ಜಯ ಸಾಧಿಸಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ.
ಮೊದಲಿಗೆ ಜಮ್ಮು ಕಾಶ್ಮೀರದ ವಿರುದ್ಧ ಕಣಕ್ಕಿಳಿದು 222 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ್ದ ಕರ್ನಾಟಕ ಎರಡನೇ ಪಂದ್ಯದಲ್ಲಿ ಉತ್ತರಾಖಂಡ ತಂಡದ ವಿರುದ್ಧ 52 ಪಂದ್ಯಗಳ ಜಯ ದಾಖಲಿಸಿತ್ತು. ಹೀಗೆ ಹ್ಯಾಟ್ರಿಕ್ ಜಯ ಸಾಧಿಸಿರುವ ಕರ್ನಾಟಕ ಕರ್ನಾಟಕ ಗ್ರೂಪ್ ಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಇನ್ನು ಮುಂಬೈ, ವಿದರ್ಭ, ರಾಜಸ್ಥಾನ್ ಹಾಗೂ ಮಧ್ಯ ಪ್ರದೇಶ ತಂಡಗಳೂ ಸಹ ತಮ್ಮ ತಮ್ಮ ಅಂಕಪಟ್ಟಿಗಳಲ್ಲಿ ಹ್ಯಾಟ್ರಿಕ್ ಜಯದೊಂದಿಗೆ ಅಗ್ರಸ್ಥಾನವನ್ನು ಅಲಂಕರಿಸಿವೆ.
ಹಾಗಿದ್ದರೆ ಟೂರ್ನಿಯ ಮೊದಲ 3 ಸುತ್ತಿನ ಪಂದ್ಯಗಳು ಮುಕ್ತಾಯವಾದ ಬಳಿಕ ಅಂಕಪಟ್ಟಿ ಹೇಗಿದೆ, ಯಾವ ತಂಡಗಳು ಟಾಪ್ 3 ಸ್ಥಾನ ಪಡೆದುಕೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಗ್ರೂಪ್ A
ಮುಂಬೈ – 3 ಪಂದ್ಯ, 3 ಗೆಲುವು, 12 ಅಂಕ
ತ್ರಿಪುರ – 3 ಪಂದ್ಯ, 2 ಗೆಲುವು, 1 ಸೋಲು, 8 ಅಂಕ
ಕೇರಳ – 3 ಪಂದ್ಯ, 2 ಗೆಲುವು, 1 ಸೋಲು, 8 ಅಂಕ
ಗ್ರೂಪ್ B
ವಿದರ್ಭ – 3 ಪಂದ್ಯ, 3 ಗೆಲುವು, 12 ಅಂಕ
ಸರ್ವಿಸಸ್ – 3 ಪಂದ್ಯ, 2 ಗೆಲುವು, 1 ಸೋಲು, 8 ಅಂಕ
ಹೈದರಾಬಾದ್ – 3 ಪಂದ್ಯ, 2 ಗೆಲುವು, 1 ಸೋಲು, 8 ಅಂಕ
ಗ್ರೂಪ್ C
ಕರ್ನಾಟಕ – 3 ಪಂದ್ಯ, 3 ಗೆಲುವು, 12 ಅಂಕ
ಹರಿಯಾಣ – 3 ಪಂದ್ಯ, 3 ಗೆಲುವು, 12 ಅಂಕ
ಚಂಡೀಗಢ – 3 ಪಂದ್ಯ, 2 ಗೆಲುವು, 1 ಸೋಲು, 8 ಅಂಕ
ಗ್ರೂಪ್ D
ರಾಜಸ್ಥಾನ್ – 3 ಪಂದ್ಯ, 3 ಗೆಲುವು, 12 ಅಂಕ
ಗುಜರಾತ್ – 3 ಪಂದ್ಯ, 2 ಗೆಲುವು, 1 ಸೋಲು 8 ಅಂಕ
ಅಸ್ಸಾಂ – 2 ಪಂದ್ಯ, 1 ಗೆಲುವು, 1 ಸೋಲು, 4 ಅಂಕ
ಗ್ರೂಪ್ E
ಮಧ್ಯ ಪ್ರದೇಶ – 3 ಪಂದ್ಯ, 3 ಗೆಲುವು, 12 ಅಂಕ
ತಮಿಳುನಾಡು – 2 ಪಂದ್ಯ, 2 ಗೆಲುವು, 8 ಅಂಕ
ಬೆಂಗಾಳ್ – 3 ಪಂದ್ಯ, 2 ಗೆಲುವು, 1 ಸೋಲು 8 ಅಂಕ