Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

U19 World Cup 2024: ಪರಿಷ್ಕೃತ ಹೊಸ​ ವೇಳಾಪಟ್ಟಿ ಪ್ರಕಟ

ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಅಂಡರ್-19 ಪುರುಷರ ಏಕದಿನ ಕ್ರಿಕೆಟ್ ವಿಶ್ವಕಪ್​ನ ಪರಿಷ್ಕೃತ ವೇಳಾಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ.

ಜನವರಿ 19 ರಿಂದ ಫ್ರೆಬ್ರವರಿ 11 ರವರೆಗೆ ಸೌಥ್‌ ಆಫ್ರಿಕಾದಲ್ಲಿ ಈ ಟೂರ್ನಿ ನಡೆಯಲಿದೆ. ಈ ಟೂರ್ನಿ ಆಯೋಜಕತ್ವವನ್ನು ಈ ಹಿಂದೆ ಶ್ರೀಲಂಕಾ ಪಡೆದಿತ್ತು. ಆದರೆ, ನವೆಂಬರ್‌ ನಲ್ಲಿ ಐಸಿಸಿ ಶ್ರೀಲಂಕಾ ಬೋರ್ಡ್‌ನ್ನು ಅಮಾನತುಗೊಳಿಸಿದ ಹಿನ್ನಲೆ 15ನೇ ಆವೃತ್ತಿಯ ಅಂಡರ್-19 ವಿಶ್ವಕಪ್‌ನ್ನು ದಕ್ಷಿಣ ಆಫ್ರಿಕಾಗೆ ಸ್ಥಳಾಂತರಿಸಲಾಗಿದೆ.

ಆತಿಥೇಯ ಸೌತ್ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಉದ್ಘಾಟನಾ ಪಂದ್ಯವನ್ನು ಆಡಲಿದೆ. ಹಾಲಿ ಚಾಂಪಿಯನ್ ಟೀಂ ಇಂಡಿಯಾ ಜನವರಿ 20 ರಂದು ಬಾಂಗ್ಲಾದೇಶ ವಿರುದ್ಧ ಆಡುವ ಮೂಲಕ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.

ಒಟ್ಟು ಐದು ಸ್ಟೇಡಿಯಂಗಳಲ್ಲಿ ಟೂರ್ನಿ ಆಯೋಜಿಸಲಾಗಿದೆ. ಬ್ಲೋಮ್‌ಫಾಂಟೈನ್‌ನ ಮಂಗಾಂಗ್ ಓವಲ್ ಮೈದಾನ, ಪೂರ್ವ ಲಂಡನ್‌ನ ಬಫಲೋ ಪಾರ್ಕ್ ಸ್ಟೇಡಿಯಂ, ಕಿಂಬರ್ಲಿಯಲ್ಲಿ ಕಿಂಬರ್ಲಿ ಓವಲ್ ಮೈದಾನ, ಪಾಚೆಫ್‌ಸ್ಟ್ರೂಮ್‌ನ ಜೆಬಿ ಮಾರ್ಕ್ಸ್ ಓವಲ್ ಮತ್ತು ಬೆನೋನಿಯ ವಿಲೋಮೂರ್ ಪಾರ್ಕ್ ಸ್ಟೇಡಿಯಂಗಳಲ್ಲಿ ಒಟ್ಟು 41 ಪಂದ್ಯಗಳು ನಡೆಯಲಿದೆ.

16 ತಂಡಗಳು 4 ಗ್ರೂಪ್: ಅಂಡರ್​-19 ವಿಶ್ವಕಪ್​ನಲ್ಲಿ ಒಟ್ಟು 16 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಇಲ್ಲಿ ಪ್ರತಿ ಗ್ರೂಪ್​ಗಳಲ್ಲಿ ಮೊದಲೆರಡು ಅಗ್ರಸ್ಥಾನಗಳನ್ನು ಅಲಂಕರಿಸುವ ತಂಡಗಳು ಮುಂದಿನ ಹಂತಕ್ಕೇರಲಿದೆ.

ಅಂಡರ್-19 ವಿಶ್ವಕಪ್​ ಗ್ರೂಪ್​ಗಳು:
ಗ್ರೂಪ್​-A : ಭಾರತ, ಬಾಂಗ್ಲಾದೇಶ್, ಯುಎಸ್​ಎ, ಐರ್ಲೆಂಡ್

ಗ್ರೂಪ್​-B : ಇಂಗ್ಲೆಂಡ್, ಸೌತ್ ಆಫ್ರಿಕಾ, ವೆಸ್ಟ್ ಇಂಡೀಸ್, ಸ್ಕಾಟ್ಲೆಂಡ್

ಗ್ರೂಪ್​-C : ಆಸ್ಟ್ರೇಲಿಯಾ, ಶ್ರೀಲಂಕಾ, ಝಿಂಬಾಬ್ವೆ, ನಮೀಬಿಯಾ

ಗ್ರೂಪ್​-D : ಅಫ್ಘಾನಿಸ್ತಾನ್, ಪಾಕಿಸ್ತಾನ್, ನ್ಯೂಝಿಲೆಂಡ್, ನೇಪಾಳ

ಭಾರತ ತಂಡದ ಲೀಗ್​ ಹಂತದ ವೇಳಾಪಟ್ಟಿ:
ಜನವರಿ 20- ಭಾರತ vs ಬಾಂಗ್ಲಾದೇಶ್.
ಜನವರಿ 22- ಭಾರತ vs ಐರ್ಲೆಂಡ್.
ಜನವರಿ 28- ಭಾರತ vs ಯುಎಸ್​ಎ

ಅಂಡರ್-19 ವಿಶ್ವಕಪ್​ ವೇಳಾಪಟ್ಟಿ: 

Image

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ