Mysore
22
mist

Social Media

ಶುಕ್ರವಾರ, 27 ಡಿಸೆಂಬರ್ 2024
Light
Dark

ಕರ್ನಾಟಕದಲ್ಲಿ 3 ಹೊಸ ಅಂತರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ

ಐಪಿಎಲ್‌ನಲ್ಲಿ ಪ್ರತಿ ತಂಡಗಳಿಗೂ ಒಂದು ತವರು ಮೈದಾನವಿದ್ದು, ನಗರ ಮತ್ತು ಕೇಂದ್ರ ರೂಪಿಸಿಯೇ ಐಪಿಎಲ್‌ ತಂಡಗಳನ್ನು ರಚಿಸಲಾಗಿದೆ.

ಪಂಜಾಬ್‌ ಕಿಂಗ್ಸ್‌, ರಾಜಸ್ಥಾನ ರಾಯಲ್ಸ್‌ ತಂಡಗಳಿಗೆ ಮಾತ್ರ ಎರಡು ತವರು ಮೈದಾನಗಳಿದ್ದವು, ಈಗ ಹೊಸದಾಗಿ ಕರ್ನಾಟಕದಲ್ಲಿ 3 ಕ್ರಿಕೆಟ್‌ ಮೈದಾನಗಳು ನಿರ್ಮಾಣವಾಗುತ್ತಿರುವುದರಿಂದ ಈ ತಂಡಗಳ ಸಾಲಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಸೇರ್ಪಡೆಯಾಗಲಿದೆ.

17 ವರ್ಷಗಳಿಂದ ಆರ್‌ಸಿಬಿ ತಂಡ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಾತ್ರ ತವರು ಪಂದ್ಯಗಳನ್ನು ಆಡುತ್ತಿತ್ತು. ಈಗ ಹೊಸ ಕ್ರಿಕೆಟ್‌ ಮೈದಾನಗಳ ನಿರ್ಮಾಣದಿಂದ ಹೆಚ್ಚುವರಿ ಪಂದ್ಯಗಳ ಅವಕಾಶ ಆರ್‌ಸಿಬಿ ತಂಡಕ್ಕೆ ದೊರೆಯಲಿದೆ.

ಈಗಾಗಲೇ ಕೊಡಗು ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣದ ಕಾಮಗಾರಿ ಆರಂಭವಾಗಿದ್ದು, ಹಿಮಾಚಲ ಪ್ರದೇಶದ ಧರ್ಮಶಾಲಾ ಮೈದಾನದ ರೀತಿ ಈ ಮೈದಾನ ನಿರ್ಮಿಸಲಾಗುತ್ತಿದೆ. ವಿಶೇಷ ಎಂದರೆ ಈ ಸ್ಟೇಡಿಯಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕಿಂತ ಸ್ವಲ್ಪ ದೊಡ್ಡದಾಗಿರಲಿದೆ. ಈ ಮೈದಾನವು ಇನ್ನು 3-4 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ.

ತುಮಕೂರಿನ ಪಿ. ಗೊಲ್ಲಹಳ್ಳಿ ಮತ್ತು ಸೋರೆಕುಂಟೆ ವ್ಯಾಪ್ತಿಯಲ್ಲಿ 41 ಎಕರೆ ಭೂ ಪ್ರದೇಶದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ತಲೆ ಎತ್ತಲಿದ್ದು, ಡಿ.2ರಂದು ಈ ಸ್ಟೇಡಿಯಂಗೆ ಶಂಕು ಸ್ಥಾಪನೆ ನೆರವೇರಲಿದೆ. ಇನ್ನು 2 ವರ್ಷಗಳಲ್ಲಿ ಈ ಕ್ರಿಡಾಂಗಣವು ಲೋಕಾರ್ಪಣೆಯಾಗಲಿದೆ.

ಮೈಸೂರಿನಲ್ಲೂ ಅಂತರಾಷ್ಟ್ರೀಯ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣವಾಗುತ್ತದೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಇಲವಾಲ ಬಳಿ 20.8 ಎಕರೆ ಭೂಮಿಯನ್ನು ಕ್ರಿಕೆಟ್‌ ಸ್ಟೇಡಿಯಂಗೆ ಗುರುತಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರೀಕ್ಷಿಸಬಹುದು.

ಹೀಗೆ ಕರ್ನಾಟಕದಲ್ಲಿ 3 ಸ್ಟೇಡಿಯಂಗಳು ಲೋಕಾರ್ಪಣೆಯಾದರೆ ಆರ್‌ಸಿಬಿಗೆ ಹೋಮ್‌ ಗ್ರೌಂಡ್‌ಗಳ ಆಯ್ಕೆ ದೊರೆಯಲಿದೆ.

 

Tags: