Mysore
26
scattered clouds

Social Media

ಬುಧವಾರ, 15 ಜನವರಿ 2025
Light
Dark

ಅಂತರಾಷ್ಟ್ರೀಯ ಫುಟ್ಬಾಲ್‌ಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ ಫುಟ್ಬಾಲ್‌ ತಾರೆ ಸುನಿಲ್‌ ಚೆಟ್ರಿ!

ಭಾರತ ಕಂಡ ಖ್ಯಾತ ಫುಟ್ಬಾಲ್‌ ತಾರೆ ಸುನಿಲ್‌ ಚೆಟ್ರಿ ಅವರು ಅಂತರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಹೇಳಿದ್ದಾರೆ. ಇದೇ ಜೂನ್‌.6 ರಂದು ಕುವೈತ್‌ ವಿರುದ್ಧ ನಡೆಯಲಿರುವ ಫಿಫಾ ವಿಶ್ವಕಪ್‌ ಟೂರ್ನಿಯ ಅರ್ಹತಾ ಪಂದ್ಯದ ಬಳಿಕ ಚೆಟ್ರಿ ನಿವೃತ್ತಿ ಹೊಂದಲಿದ್ದಾರೆ.

2005 ರಲ್ಲಿ ಅಂತರಾಷ್ಟ್ರೀಯ ಫುಟ್ಬಾಲ್‌ಗೆ ಪಾದಾರ್ಪಣೆ ಮಾಡಿದ ಅವರು, 20 ವರ್ಷಗಳ ಕಾಲ ಭಾರತವನ್ನು  145 ಪಂದ್ಯಗಳಲ್ಲಿ ಪ್ರತಿನಿಧಿಸಿ 93 ಗೋಲುಗಳನ್ನು ಗಳಿಸಿದ್ದಾರೆ.

ಇನ್ನು ಫುಟ್ಬಾಲ್‌ ಇತಿಹಾಸದಲ್ಲಿ ಅತಿಹೆಚ್ಚು ಗೋಲು ಗಳಿಸಿದವರ ಪೈಕಿ ಇವರು ಮೂರನೇ ಸ್ಥಾನದಲ್ಲಿದ್ದಾರೆ. ಕ್ರಮವಾಗಿ ಮೊದಲ ಸ್ಥಾನದಲ್ಲಿ ರೊನಾಲ್ಡೋ, ಎರಡನೇ ಸ್ಥಾನವನ್ನು ಮೆಸ್ಸಿ ಅಲಂಕರಿಸಿದ್ದಾರೆ.

ಈ ಸಂಬಂಧ ಸುನಿಲ್‌ ಚಟ್ರಿ ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ತಾವು ನಿವೃತ್ತಿ ಹೊಂದುವ ಬಗ್ಗೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. “ನಾನು ಎಂದಿಗೂ ಮರೆಯಲಾಗದ ಹಾಗೂ ಆಗಾಗ್ಗೆ ನೆನಪಿಸಿಕೊಳ್ಳುವ ಒಂದು ದಿನವಿದೆ. ಅದವೇ ನಾನು ದೇಶಕ್ಕಾಗಿ ಆಡಿದ ಮೊದಲ ದಿನ. ಇದನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದು ನನ್ನ ಅತ್ಯುತ್ತಮ ದಿನಗಳಲ್ಲಿ ಒಂದಾಗಿದೆ” ಎಂದಿದ್ದಾರೆ.

ಆರಂಭದ ದಿನಗಳು ನಿಜಕ್ಕೂ ಕಷ್ಟಕರವಾಗಿತ್ತು. ನಾನು ದೆಹಲಿಯಲ್ಲಿ ಸುಬ್ರೊಟೊ ಕಪ್‌ ಆಡುವಾಗ ದೇಶಕ್ಕಾಗಿ ಆಡುತ್ತೇನೆ ಎಂದು ಭಾವಿಸಿರಲಿಲ್ಲ. ದೇವರ ದಯೆಯಿಂದ ದೇಶದ ಪರವಾಗಿ ಆಡುವ ಅವಕಾಶ ಒದಗಿಬಂತು. ದೇಶಕ್ಕಾಗಿ ಆಡುವ ಪ್ರತಿ ಕ್ಷಣವೂ ವಿಶೇಷ ಮತ್ತು ಅವಿಸ್ಮರಣೀಯ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ನಾನು ನನ್ನ ತಾಯಿ, ತಂದೆ, ಪತ್ನಿ ಹಾಗೂ ಕುಟುಂಬದ ಜೊತೆಗೆ ಸಹ ಆಟಗಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇವೆರೆಲ್ಲರೂ ಒತ್ತಡದ ಸಮಯದಲ್ಲಿ ನನ್ನ ಜತೆಗಿದ್ದು ಬೆಂಬಲ ನೀಡಿದ್ದಾರೆ ಎಂದು ನೆನಪಿಸಿಕೊಂಡಿದ್ದಾರೆ.

https://x.com/chetrisunil11/status/1790953336901976541

Tags: