Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ವಿಶ್ವಟೆಸ್ಟ್‌ ಚಾಂಪಿಯನ್‌ಶಿಪ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಟೀಂ ಇಂಡಿಯಾ!

ನವದೆಹಲಿ: ದಕ್ಷಿಣ ಆಫ್ರಿಕಾ ತಂಡದ ನಡುವಿನ ಎರಡು ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ತಲಾ ಒಂದೊಂದು ಪಂದ್ಯಗಳನ್ನು ಗಲ್ಲುವ ಮೂಲಕ ಸರಣಿ ಸಮಬಲ ಸಾಧಿಸಿದ ಹಿನ್ನಲೆಯಲ್ಲಿ ಭಾರತ ತಂಡ ವಿಶ್ವ ಟೆಸ್ಟ್‌ ಚಾಂಪಯನ್‌ ಶಿಪ್‌ ಟೂರ್ನಿಯಲ್ಲಿ ಅಗ್ರಸ್ಥಾನಕೇರಿದೆ.

ಕೇಪ್‌ಟೌನ್‌ ನಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ಹರಿಣಗಳ ಬೇಟೆಯಾಡಿತು. ಭಾರತ ಬೌಲರ್‌ಗಳ ಮುಂದೆ ಮಂಕಾದ ಆಫ್ರಿಕಾ ತಂಡ ತತ್ತರಿಸಿ ಹೋಯಿತು. ಟೀಂ ಇಂಡಿಯಾ ಪರ ಬುಮ್ರಾ ಮತ್ತು ಸಿರಾಜ್‌ ೧೫ ವಿಕೆಟ್‌ಗಳನ್ನು ಪಡೆದು ಗಮನ ಸೆಳೆದರು.

೨೦೨೩-೨೫ರ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಭಾರತ ೫೪.೧೫ ಶೇಕಡಾವಾರು ಅಂಕದೊಂದಿಗೆ ಅಗ್ರಸ್ಥಾನಕ್ಕೇರಿತು. ಹರಿಣ ಪಡೆ ೫೦ ಶೇಕಡಾವಾರು ಅಂಕದೊಂದಿಗೆ ಎರಡನೇ ಸ್ಥಾನದಲ್ಲಿದೆ.

ಭಾರತ 26 ಅಂಕಗಳನ್ನು ತನ್ನ ಖಾತೆಯಲ್ಲಿ ಹೊಂದಿದ್ದು ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಲಾ 12 ಅಂಕಗಳನ್ನು ಹೊಂದಿವೆ. ಆಸ್ಟ್ರೇಲಿಯಾ 42 ಹಾಗೂ ಬಾಂಗ್ಲಾದೇಶ 12 ಅಂಕ ಪಡೆದಿದ್ದು, ಎಲ್ಲ ತಂಡಗಳ ಯಶಸ್ಸಿನ ದರ ಶೇಕಡ 50ರಷ್ಟಿದೆ. ಪಾಕಿಸ್ತಾನ 22 ಅಂಕ ಹೊಂದಿದ್ದರೂ, ಶೇಕಡಾವಾರು ಯಶಸ್ಸಿನ ದರದಲ್ಲಿ ಆರನೇ ಸ್ಥಾನಗಳಲ್ಲಿವೆ.

ಕೇವಲ ೧೦೭ ಓವರ್‌ಗಳಲ್ಲಿಯೇ ಅಂತ್ಯಗೊಂಡ ಪಂದ್ಯದಲ್ಲಿ ಟೀಂ ಇಂಡಿಯಾ ತಂಡ ಹರಿಣಗಳ ವಿರುದ್ಧ ಏಳು ವಿಕೆಟ್‌ಗಳ ಅಂತರದಿಂದ ಸೋಲಿಸಿತು. ಮೊದಲ ಪಂದ್ಯದಲ್ಲಿ ಹಿನಾಯ ಸೋಲು ಅನುಭವಿಸಿದ್ದ ಭಾರತ ತಂಡ ಎರಡನೇ ಟೆಸ್ಟ್‌ನಲ್ಲಿ ಗೆಲ್ಲುವ ಮೂಲಕ ಸರಣಿ ಸಮಬಲ ಸಾಧಿಸಿತ್ತು. ಇದರೊಂದಿಗೆ ಕೇಪ್‌ಟೌನ್‌ ನಲ್ಲಿ ಗೆಲುವನ್ನೇ ಕಾಣದ ಟೀಂ ಇಂಡಿಯಾ ತಂಡ ತನ್ನ ಮೊಲದ ಗೆಲುವು ದಾಖಲಿಸಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ