Mysore
28
scattered clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡಲಿರುವ ಭಾರತ ತಂಡ

ಮೆಲ್ಬರ್ನ್‌: ಈ ವರ್ಷದ ಆಕ್ಟೋಬರ್‌ ತಿಂಗಳಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡವು ಏಕದಿನ ಹಾಗೂ ಟಿ20 ಸರಣಿಯಲ್ಲಿ ಆಡಲಿದೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ಭಾನುವಾರ ತಿಳಿಸಿದೆ.

ಬಾರ್ಡರ್‌-ಗವಸ್ಕಾರ್‌ ಟ್ರೋಫಿಯ ಬಳಿಕ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಮೊದಲ ಸರಣಿ ಇದಾಗಿದೆ.

ಆಕ್ಟೋಬರ್‌ 19 ರಿಂದ ನವೆಂಬರ್‌ 8 ರವರೆಗೆ ಪಂದ್ಯಗಳು ನಡೆಯಲಿವೆ. ಏಕದಿನ ಪಂದ್ಯಗಳು ಪರ್ತ್‌, ಅಡಿಲೇಡ್‌ ಹಾಗೂ ಸಿಡ್ನಿಯಲ್ಲಿ ನಡೆಯಲಿವೆ. ಟಿ20 ಪಂದ್ಯಗಳು ಕ್ಯಾನ್‌ಬೆರಾ, ಮೆಲ್ಬರ್ನ್‌, ಹೋಬರ್ಟ್‌, ಗೋಲ್ಡ್‌ಕೋಸ್ಟ್‌, ಬ್ರಿಸ್ಬೇನ್‌ನಲ್ಲಿ ನಡೆಯಲಿದೆ.

ಏಕದಿನ ಪಂದ್ಯಗಳು

* ಅಕ್ಟೋಬರ್‌ 19: ಪರ್ತ್‌

* ಅಕ್ಟೋಬರ್‌ 23: ಅಡಿಲೇಡ್‌

* ಅಕ್ಟೋಬರ್‌ 25: ಸಿಡ್ನಿ

ಟಿ20 ಪಂದ್ಯಗಳು

* ಅಕ್ಟೋಬರ್‌ 29: ಕ್ಯಾನ್‌ಬೆರಾ

* ಅಕ್ಟೋಬರ್‌ 31: ಮೆಲ್ಬರ್ನ್‌

* ನವೆಂಬರ್‌ 2: ಹೋಬರ್ಟ್‌

* ನವೆಂಬರ್‌ 6: ಗೋಲ್ಡ್‌ಕೋಸ್ಟ್‌

* ನವೆಂಬರ್‌ 8: ಬ್ರಿಸ್ಬೇನ್‌

 

Tags:
error: Content is protected !!