ನವದೆಹಲಿ : ಟೀಮ್ ಇಂಡಿಯಾದ ಹೊಸ ಜೆರ್ಸಿಯನ್ನು ಬಿಸಿಸಿಐ ಇಂದು ಅನಾವರಣಗೊಳಿಸಿದೆ. ಭಾರತ ತಂಡದ ಹೊಸ ಜೆರ್ಸಿ ಸಂಪೂರ್ಣವಾಗಿ ಆಕಾಶ ನೀಲಿಯಿಂದ ಕೂಡಿದ್ದು ತೋಳಿನ ಅರ್ಧ ಭಾಗದಲ್ಲಿ ಮಾತ್ರ ಗಾಢ ನೀಲಿಯನ್ನು ಹೊಂದಿದೆ.
ಜರ್ಸಿ ಪ್ರಾಯೋಜಕತ್ವ ಪಡೆದಿರುವ ಎಂಪಿಎಲ್ ಜರ್ಸಿಯ ಬಲಭಾಗದಲ್ಲಿ ದೊಡ್ಡ ಅಕ್ಷರಗಳನ್ನು ಕಾಣಬಹುದಾಗಿದೆ.
ಸದ್ಯ ಟೀಮ್ ಇಂಡಿಯಾದ ಹಳೆಯ ಜರ್ಸಿಗು ಈಗ ಅನಾವರಣಗೊಳಿಸಿರುವ ಹೊಸ ಜರ್ಸಿಗೂ ತುಂಬಾ ವ್ಯತ್ಯಾಸವಿದೆ. ಈ ಹಿಂದೆ ಇದ್ದಂತಹ ಜರ್ಸಿ ಗಾಢ ನೀಲಿಂದ ಕೂಡಿತ್ತು ಆದರೆ ಈಗ ಬಿಡುಗಡೆಗೊಳಿಸಿರುವ ಜರ್ಸಿ ಆಕಾಶ ನೀಲಿ ಬಣ್ಣದಿಂದ ಕೂಡಿದ್ದು.
ತೋಳಿನ ಅರ್ಧ ಭಾಗ ಮಾತ್ರ ಕಾಡ ನೀಲಿಯನ್ನು ಉಳಿಸಿಕೊಂಡಿದೆ. ಟಿ ಟ್ವೆಂಟಿ ವಿಶ್ವಕಪ್ ಪಂದ್ಯಕ್ಕೆ ಸಿದ್ಧತೆ ನಡೆಸುತ್ತಿರುವ ಟೀಮ್ ಇಂಡಿಯಾದ ತಯಾರಿಯ ಸಂದರ್ಭದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಜರ್ಸಿಯನ್ನು ಬಿಡುಗಡೆ ಮಾಡಿದೆ.