Mysore
27
broken clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಪ್ರಜಾಪ್ರಭುತ್ವ ಮುಂದೆ ತರಲು ಯುವ ಜನತೆ ಮತದಾನ ಮಾಡಿ: ಕ್ರಿಕೆಟಿಗ ರಾಹುಲ್‌ ದ್ರಾವಿಡ್‌!

ಬೆಂಗಳೂರು: ಮತಚಲಾವಣೆ ನಮ್ಮ ಸಂವಿಧಾನ ಹಕ್ಕಾಗಿದ್ದು, ಮತದಾನ ಪ್ರಜಾಪ್ರಭುತ್ವವನ್ನು ಮುಂದೆ ತರಲು ಒಂದು ಉತ್ತಮ ಅವಕಾಶವಾಗಿದೆ ಹೀಗಾಗಿ ಎಲ್ಲರು ತಪ್ಪದೇ ಮತದಾನ ಮಾಡಿ ಎಂದು ಟೀಂ ಇಂಡಿಯಾದ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್‌ ಅವರು ಸಲಹೆ ನೀಡಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರದ ಶಿಕ್ಷಾ ಸ್ಕೂಲ್‌ ಮತಗಟ್ಟೆಗೆ ಕೋಚ್‌ ರಾಹುಲ್‌ ದ್ರಾವಿಡ್‌, ತಮ್ಮ ಪತ್ನಿ ಮತ್ತು ಮಗನ ಜೊತೆಯಲ್ಲಿ ಆಗಮಿಸಿ ಮತದಾನ ಮಾಡಿದ್ದಾರೆ.

ಬಳಿಕ ಮಾತನಾಡಿದ ಅವರು, ಮತದಾನ ಮಾಡುವುದು ಸಂವಿಧಾನಾತ್ಮಕ ಹಕ್ಕು ಎಲ್ಲರೂ ಬಂದು ಮತದಾನ ಮಾಡಿ, ಅತಿ ಹೆಚ್ಚು ಹೆಚ್ಚು ಜನರು ಬಂದು ಮತದಾನ ಮಾಡಿ, ಈ ಬಾರಿ ಬೆಂಗಳೂರಿನಲ್ಲಿ ಮತದಾನ ಹೆಚ್ಚಾಗಿ ನಡೆಯಬೇಕು ಎಂದಿದ್ದಾರೆ.

ಮತಗಟ್ಟೆಗಳಲ್ಲಿ ಬಿಗಿ ಬಂದೋಬಸ್ತ್‌ ಹಾಗೂ ಅಚ್ಚುಕಟ್ಟಿನ ನಿರ್ವಹಣೆ ಮಾಡಲಾಗಿದೆ. ಪೊಲೀಸರು ಬಿಗಿ ಬಂದೋಬಸ್ತ್‌ ನೀಡಿದ್ದಾರೆ. ಎಲ್ಲವು ಚೆನ್ನಾಗಿ ನಡೆಯುತ್ತಿದೆ ಎಂದರು.

ಇನ್ನು ಬೆಂಗಳೂರಿನಲ್ಲಿ ಯುವಕರು ಮತದಾನ ಮಾಡಲು ನಿರ್ಲಕ್ಷ್ಯ ವಹಿಸುತ್ತಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ಯುವಕರೆಲ್ಲಾ ಬರಬೇಕು. ಮತದಾನದ ಬಗ್ಗೆ ಮಾಧ್ಯಮಗಳು ಹೆಚ್ಚಿನ ಪ್ರಚಾರ ಮಾಡಬೇಕು. ಯುವಕ-ಯುವತಿಯರನ್ನು ಮತದಾನಕ್ಕೆ ಸೆಳೆಯಲು ಮಾಧ್ಯಮದ ಪಾತ್ರ ಮುಖ್ಯವಾಗಿದ್ದು, ಅದನ್ನು ನೀವು ಮಾಡಬೇಕು. ಈ ಬಾರಿ ಮೊದಲ ಬಾರಿ ಮತದಾನ ಮಾಡುವವರು ಹೆಚ್ಚಾಗಿದ್ದು, ಎಲ್ಲರೂ ಬಂದು ತಪ್ಪದೇ ಮತದಾನ ಮಾಡಿ ಎಂದು ಟೀಂ ಇಂಡಿಯಾ ಕೋಚ್‌ ರಾಹುಲ್‌ ದ್ರಾವಿಡ್‌ ಹೇಳಿದ್ದಾರೆ.

Tags:
error: Content is protected !!