Mysore
25
clear sky

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಬಾರ್ಬಡೋಸ್‌ನಲ್ಲಿಯೇ ಬೀಡುಬಿಟ್ಟ ಟೀಂ ಇಂಡಿಯಾ: ಅಸಲಿ ಕಾರಣ ಇದು!

ಬಾರ್ಬಡೋಸ್‌: ಟಿ20 ವಿಶ್ವಕಪ್‌ ವಿಜೇತ ಭಾರತ ತಂಡ ಟೂರ್ನಿ ನಡೆದು ಎರಡು ದಿನಗಳಾಗಿದ್ದರೂ ಇನ್ನು ಭಾರತದ ಮಣ್ಣಿಗೆ ಕಾಲಿಟ್ಟಿಲ್ಲ. ಭಾರತೀಯರು ವಿಶ್ವಕಪ್‌ ವಿಜಯ ಸಂಭ್ರಮಾಚರಣೆ ಮಾಡಲು ಇನ್ನು ಕೆಲವು ದಿನಗಳು ಕಾಯಬೇಕಾಗಿದೆ.

ವೆಸ್ಟ್‌ ಇಂಡೀಸ್‌ನ ಕೆರೆಬಿಯ್‌ ದ್ವೀಪಗಳಲ್ಲಿ ಸೋಮವಾರ ಬೆಳಿಗಿನ ಜಾವದಿಂದಲೂ ಕೆಟಗರಿ ಚಂಡಮಾರುತ ಬೀಸುತ್ತಿರುವುದರಿಂದ ವಿಮಾನವೂ ಸೇರಿದಂತೆ ಎಲ್ಲ ನಾಗರೀಕ ಸೇವೆಗಳನ್ನು ಸ್ಥಗಿತಗೊಳಸಿದ್ದು, ವಿಮಾನ ಹಾರಾಟವೂ ಕೂಡಾ ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ಬಿರುಗಾಳಿಯ ಮಟ್ಟ ತೀವ್ರವಾದ ಹಿನ್ನೆಲೆ ಮೂರು ಲಕ್ಷ ಜನಸಂಖ್ಯೆ ಇರುವ ಈ ದ್ವೀಪವನ್ನು ಭಾನುವಾರ ಸಂಜೆಯಿಂದಲೇ ಲಾಕ್‌ಡೌನ್‌ ಮಾಡಲಾಗಿದೆ. ಇಂದು (ಜುಲೈ.2) ಅಥವಾ ನಾಳೆ (ಜುಲೈ.3) ಟೀಂ ಇಂಡಿಯಾ ಆಟಗಾರರು ಭಾರತಕ್ಕೆ ಮರಳಲಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕಾರ್ಯರ್ಶಿ ಜೈ ಶಾ, ನಾವು ಇಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ಮೊದಲಿಗೆ ಆಟಗಾರರನ್ನು ಸುರಕ್ಷಿತವಾಗಿ ದೇಶಕ್ಕೆ ರವಾನಿಸಲಾಗುವುದು ಇದಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಇದರ ಜೊತೆಗೆ ಭಾರತದಿಂದ ತೆರಳಿರುವ ಮಾಧ್ಯಮ ಮಿತ್ರರರನ್ನು ಸಹಾ ಸುರಕ್ಷಿತವಾಗಿ ದೇಶಕ್ಕೆ ಕರೆತರಲಾಗುವುದು ಎಂದು ಅವರು ಹೇಳಿದರು.

Tags:
error: Content is protected !!