ಹರಾರೆ: ಜಿಂಬಾಬ್ವೆ ವಿರುದ್ಧದ ಕೊನೆಯ ಪಂದ್ಯದಲ್ಲಿ 42 ರನ್‌ಗಳ ಅಂತರದಿಂದ ಗೆಲುವು ದಾಖಲಿಸಿದ ಟೀಂ ಇಂಡಿಯಾ ತಂಡ ಐದು ಟಿ20 ಪಂದ್ಯಗಳ ಸರಣಿಯನ್ನು 4-1 ಅಂತರದಿಂದ ವಶಪಡಿಸಿಕೊಂಡಿತು.
ಇಲ್ಲಿನ ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿ 168 ರನ್‌ಗಳ ಸ್ಪರ್ಧಾತ್ಮಕ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಜಿಂಬಾಬ್ವೆ 18.3 ಓವರ್‌ಗಳಲ್ಲಿ ಆಲ್‌ಔಟ್ ಆಗುವ ಮೂಲಕ 125 ರನ್ ಕಲೆಹಾಕಿ 42 ರನ್‌ಗಳ ಅಂತರದಿಂದ ಸೋಲನುಭವಿಸಿತು.
ಟೀಂ ಇಂಡಿಯಾ ಇನ್ನಿಂಗ್ಸ್: ಕೊನೆಯ ಟಿ20 ಪಂದ್ಯದಲ್ಲಿ ಟಾಸ್ ಸೋತು ಬ್ಯಾಟ್ ಮಾಡಿದ ಭಾರತ ತಂಡದ ಪರವಾಗಿ ನಾಯಕ ಶುಭ್‌ಮನ್ ಗಿಲ್ ಹಾಗೂ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಿದರು. ಜೈಸ್ವಾಲ್ 12(5) ಬೇಗನೇ ಔಟಾದರೇ, ನಾಯಕ ಗಿಲ್ 13(14)ರನ್ ಗಳಿಸಿ ಅವರನ್ನೇ ಹಿಂಬಾಲಿಸಿದರು.
ಸಂಜು ಸ್ಯಾಮ್ಸನ್ 45 ಎಸೆತಗಳಲ್ಲಿ 1 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 58 ರನ್ ಗಳಿಸದರು. ಇದು ತಂಡದ ಪರವಾಗಿ ಗಳಿಸಿದ ಗರಿಷ್ಠ ರನ್ ಆಗಿತ್ತು. ಉಳಿದಂತೆ ಅಭಿಷೇಕ್ ಶರ್ಮಾ 14(11) ರನ್, ರಿಯಾನ್ ಪರಾಗ್ 22(24)ರನ್, ದುಬೆ 26(12)ರನ್, ರಿಂಕು ಹಾಗೂ ವಾಷಿಂಗ್‌ಟನ್ ಸುಂದರ್ ಔಟಾಗದೇ ತಲಾ 11(9)ರನ್, 1(1)ರನ್ ಗಳಿಸಿದರು.
ಜಿಂಬಾಬ್ವೆ ಪರ ಮುಜರಬಾನಿ ಎರಡು ವಿಕೆಟ್ ನಾಗರವ, ನಾಯಕ ರಾಝಾ ಹಾಗೂ ಬ್ರಂಡನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಜಿಂಬಾಬ್ವೆ ಇನ್ನಿಂಗ್ಸ್: ಟೀಂ ಇಂಡಿಯಾ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಜಿಂಬಾಬ್ವೆಗೆ ಮುಖೇಶ್ ಕುಮಾರ್ ಆಘಾತ ನೀಡಿದರು. ವೆಸ್ಲಿ ಅವರು ಮುಖೇಶ್ ಕುಮಾರ್ ಅವರ ಮೊದಲ ಓವರ್‌ನಲ್ಲಿಯೇ ಬಲಿಯಾದರು. ಬಳಿಕ ಬಂದ ಬೆನೆಟ್ 10(8) ರನ್ ಗಳಿಸಿ ಮುಖೇಶ್‌ಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಚೇಸಿಂಗ್ ವೇಳೆ ಮೇಯರ್ ಗಳಿಸಿದ 34(32)ರನ್ ವೈಯಕ್ತಿಕ ಗರಿಷ್ಠ ರನ್ ಆಗಿತ್ತು. ಫರಾಜ್ ಅಕ್ರಮ್ 27(13) ರನ್ ಗಳಿಸಿದರು ಇದರ ಹೊರತಾಗಿ ಬೇರಾರಿಂದಲೂ ಉತ್ತಮ ಇನ್ನಿಂಗ್ಸ್ ಕಟ್ಟಿ ಗೆಲ್ಲುವಲ್ಲಿ ವಿಫಲರಾದರು.
ಮುರುಮಾನಿ 27(24), ಸಿಕಂದರ್ ರಾಜಾ 8(12), ಕ್ಯಾಂಪ್‌ಬೆಲ್ 4(7), ಕ್ಲೈವ್ 1(4), ಬ್ರಂಡನ್ 4(7), ನಾಗವರ ಡಕ್‌ಔಟ್, ಮುಜರಬಾನಿ ಔಟಾಗದೇ 1(2)ರನ್ ಗಳಿಸಿದರು.
ಟೀಂ ಇಂಡಿಯಾ ಪರವಾಗಿ ಮುಖೇಶ್ ಕುಮಾರ್ 4 ವಿಕೆಟ್, ಶಿವಂ ದುಬೆ 2 ವಿಕೆಟ್, ಅಭಿಷೇಕ್ ಶರ್ಮಾ, ದೇಶ್‌ಪಾಂಡೆ ಹಾಗೂ ವಾಷಿಂಗ್‌ಟನ್ ಸುಂದರ್ ತಲಾ ಒಂದೊಂದು ವಿಕೆಟ್ ಕಬಳಿಸಿ ಮಿಂಚಿದರು.
ಪಂದ್ಯ ಶ್ರೇಷ್ಠ: ಶಿವಂ ದುಬೆ
ಸರಣಿ ಶ್ರೇಷ್ಠ: ವಾಷಿಂಗ್‌ಟನ್ ಸುಂದರ್





