Mysore
18
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

t20 worldcup 2024: ರೋಚಕ ಹಣಾಹಣೆಯಲ್ಲಿ ಗೆದ್ದುಬೀಗಿದ ಭಾರತ; ಪಾಕ್‌ ಬಹುತೇಕ ಟೂರ್ನಿಯಿಂದ ಹೊರಕ್ಕೆ!

ನ್ಯೂಯಾರ್ಕ್:‌ ಟೀಂ ಇಂಡಿಯಾದ ಸಂಘಟಿತ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ದಾಳಿಗೆ ತುತ್ತಾದ ಪಾಕಿಸ್ತಾನ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಎದುರು ಹೀನಾಯ ಸೋಲು ಕಂಡಿದೆ. ಆ ಮೂಲಕ ಪಾಕಿಸ್ತಾನ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಸತತ ಎರಡನೇ ಪಂದ್ಯ ಸೋಲುವ ಮೂಲಕ ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆ ಆಗಿದೆ.

ಇಲ್ಲಿನ ನಸ್ಸೌ ಕೌಂಟಿ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಟಿ 20 ವಿಶ್ವಕಪ್‌ ಟೂರ್ನಿಯ ಗ್ರೂಪ್‌ ಹಂತದ 19ನೇ ಪಂದ್ಯದಲ್ಲಿ ಭಾರತ 19 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 119 ರನ್‌ ಗಳಿಸಿ ಪಾಕ್‌ಗೆ 120 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 113 ರನ್‌ ಕಲೆಹಾಕುವ ಮೂಲಕ 6 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿದೆ.

ಟಾಸ್‌ ಗೆದ್ದು ಫೀಲ್ಡಿಂಗ್‌ ಆರಿಸಿಕೊಂಡ ಪಾಕಿಸ್ತಾನ ಟೀಮ್‌ ಇಂಡಿಯಾವನ್ನು ಮೊದಲು ಬ್ಯಾಟಿಂಗ್‌ ಮಾಡಲು ಆಹ್ವಾನಿಸಿತು. ಆರಂಭದಲ್ಲಿ ಮಳೆ ಅಡ್ಡಿಯೊಂದಿಗೆ ತಡವಾಗಿ ಶುರುವಾದ ಇನ್ನಿಂಗ್ಸ್‌ನಲ್ಲಿ ತಂಡದ ಪರ ರಿಷಭ್‌ ಪಂತ್‌ ಹೊರತುಪಡಿಸಿ ಉಳಿದ ಯಾವ ಆಟಗಾರರೂ ಸಹ ದೊಡ್ಡ ಆಟವನ್ನಾಡಲಿಲ್ಲ.

ಟೀಮ್‌ ಇಂಡಿಯಾ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಉತ್ತಮ ಆರಂಭ ಕಟ್ಟಿಕೊಡುವಲ್ಲಿ ಎಡವಿದರು. ಕೊಹ್ಲಿ 4 (3) ರನ್‌ ಗಳಿಸಿದರೆ, ರೋಹಿತ್‌ 13 (12)ರನ್‌ ಗಳಿಸಿದರು. ಇನ್ನುಳಿದಂತೆ ರಿಷಭ್‌ ಪಂತ್‌ 42 (31) ರನ್‌, ಅಕ್ಷರ್‌ ಪಟೇಲ್‌ 20 (18) ರನ್‌, ಸೂರ್ಯಕುಮಾರ್‌ ಯಾದವ್‌ 7 (8) ರನ್‌, ಶಿವಮ್‌ ದುಬೆ 3 (9) ರನ್‌, ಹಾರ್ದಿಕ್‌ ಪಾಂಡ್ಯ 7 (12) ರನ್‌, ರವೀಂದ್ರ ಜಡೇಜಾ ಗೋಲ್ಡನ್ ಡಕ್‌ಔಟ್‌, ಅರ್ಷ್‌ದೀಪ್‌ ಸಿಂಗ್‌ 9 (13) ರನ್‌, ಜಸ್‌ಪ್ರೀತ್‌ ಬುಮ್ರಾ ಗೋಲ್ಡನ್‌ ಡಕ್‌ಔಟ್‌ ಮತ್ತು ಮೊಹಮ್ಮದ್‌ ಸಿರಾಜ್‌ ಅಜೇಯ 7 (7) ರನ್‌ ಕಲೆಹಾಕಿದರು.

ಪಾಕಿಸ್ತಾನದ ಪರ ನಸೀಮ್‌ ಶಾ ಹಾಗೂ ಹ್ಯಾರಿಸ್‌ ರೌಫ್‌ ತಲಾ 3 ವಿಕೆಟ್‌ ಪಡೆದರೆ, ಮೊಹಮ್ಮದ್‌ ಆಮೀರ್‌ 2 ವಿಕೆಟ್‌ ಮತ್ತು ಶಾಹೀನ್‌ ಅಫ್ರಿದಿ 1 ವಿಕೆಟ್‌ ಪಡೆದರು.

ಪಾಕಿಸ್ತಾನ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ನಾಯಕ ಬಾಬರ್‌ ಅಜಮ್‌ ಮತ್ತು ಮೊಹಮ್ಮದ್‌ ರಿಜ್ವಾನ್‌ ಕಣಕ್ಕಿಳಿದರು. ಬಾಬರ್‌ 13 (10) ರನ್‌, ಮೊಹಮ್ಮದ್‌ ರಿಜ್ವಾನ್‌ 31(44) ರನ್‌ ಬಾರಿಸಿ ಔಟಾದರು. ಈ ಪಂದ್ಯದಲ್ಲಿಯೂ ಕೂಡಾ ಪಾಕಿಸ್ತಾನಕ್ಕೆ ಮಧ್ಯಮ ಕ್ರಮಾಂಕ ಕೈಕೊಟ್ಟಿತು. ಉಸ್ಮಾನ್‌ ಖಾನ್‌ 13(15) ರನ್‌, ಫಕರ್‌ ಜಮಾನ್‌ 13(8) ರನ್‌, ಇಮಾದ್‌ ವಾಸೀಮ್‌ 15(23) ರನ್‌, ಶದಾಬ್‌ ಖಾನ್‌ 4(7) ರನ್‌ ಇಫ್ತಿಕರ್‌ ರೆಹಮಾನ್‌ 5(9) ರನ್‌ ಗಳಿಸಿದರು. ಕೊನೆಯಲ್ಲಿ ನಸೀಮ್‌ ಶಾ ಹಾಗೂ ಶಾಹೀನ್‌ ಶಾ ಅಫ್ರಿದಿ ಓಟಾಗದೇ ಕ್ರಮವಾಗಿ 10(4) ರನ್‌ ಹಾಗೂ 0(1) ರನ್‌ ಗಳಿಸಿದರು ತಂಡಕ್ಕೆ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.

ಟೀಂ ಇಂಡಿಯಾ ಪರ ಉತ್ತಮ ಬೌಲಿಂಗ್‌ ಪ್ರದರ್ಶಿಸಿದ ಜಸ್‌ಪ್ರಿತ್‌ ಬುಮ್ರಾ 3 ವಿಕೆಟ್‌, ಹಾರ್ದಿಕ್‌ ಪಾಂಡ್ಯ 2 ವಿಕೆಟ್‌ ಹಾಗೂ ಅರ್ಶ್‌ದೀಪ್‌ ಸಿಂಗ್‌ ಮತ್ತು ಜಡೇಜಾ ತಲಾ 1 ವಿಕೆಟ್‌ ಪಡೆದು ಮಿಂಚಿದರು.

ಪಂದ್ಯ ಶ್ರೇಷ್ಠ: ಜಸ್‌ಪ್ರಿತ್‌ ಬುಮ್ರಾ

Tags:
error: Content is protected !!