Mysore
25
haze

Social Media

ಭಾನುವಾರ, 07 ಡಿಸೆಂಬರ್ 2025
Light
Dark

Asiacup 2024: ಪಾಕ್‌ ಬಗ್ಗುಬಡಿದು ಟೂರ್ನಿಯಲ್ಲಿ ಶುಭಾರಂಭ ಮಾಡಿದ ಭಾರತ!

ಡಂಬುಲ್ಲಾ: ಭಾರತ ತಂಡ ಕರಾರುವಕ್ಕಾದ ಬೌಲಿಂಗ್‌ ದಾಳಿಗೆ ನಲುಗಿದ ಪಾಕಿಸ್ತಾನ ಮಹಿಳಾ ತಂಡ ಏಷ್ಯಾಕಪ್‌ 2024ರ ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಮುಂದೆ 7 ವಿಕೆಟ್‌ಗಳ ಅಂತರದಿಂದ ಹೀನಾಯ ಸೋಲು ಅನುಭವಿಸಿತು. ಪಾಕಿಸ್ತಾನ ತಂಡವನ್ನು ಬಗ್ಗುಬಡಿಯುವ ಮೂಲಕ ಮಹಿಳಾ ಭಾರತ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಇಲ್ಲಿನ ರಂಗಿರಿ ಡಂಬುಲ್ಲಾ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್‌ನ ಎರಡನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್‌ ಮಾಡಿತು. 19.2 ಓವರ್‌ಗಳಿಗೆ ಆಲ್‌ಔಟ್‌ ಆಗಿದ ಪಾಕಿಸ್ತಾನ ಕೇವಲ 108 ರನ್‌ ಗಳಿಸಿ ಭಾರತ ತಂಡಕ್ಕೆ 109ರನ್‌ಗಳ ಸಾಧಾರಣ ಗುರಿ ನೀಡಿತ್ತು. ಈ ಮೊತ್ತ ಬೆನ್ನತ್ತಿದ ಭಾರತ ತಂಡ ಕೇವಲ 14.1 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 109 ರನ್‌ ಕಲೆಹಾಕಿ ಗೆಲುವಿನ ನಗೆ ಬೀರಿತು.

ಪಾಕಿಸ್ತಾನ್‌ ಇನ್ನಿಂಗ್ಸ್:‌ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕರಾಗಿ ಬಂದ ಗುಲ್ ಫಿರೋಜಾ 5(5), ಮುಬೀನಾ ಅಲಿ 11(11) ಅವರನ್ನು ಔಟ್‌ ಮಾಡುವ ಮೂಲಕ ಪಾಕಿಸ್ತಾನಕ್ಕೆ ಪೂಜಾ ಆರಂಭಿಕ ಬ್ರೇಕ್‌ ಹಾಕಿದರು.

ಬಳಿಕ ಬಂದ ಅಮೀನ್‌ 25(35) ರನ್‌ ಗಳಿಸಿದ್ದೇ ತಂಡದ ಪರವಾಗಿ ಗಳಿಸಿದ ಗರಿಷ್ಠ ರನ್‌. ಟುಬಾ ಹಸನ್‌ 22(19) ಹಾಗೂ ಫಾತಿಮಾ ಸನ ಔಟಾಗದೇ 22(16) ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿ ತಂಡದ ಮೊತ್ತ ನೂರರ ಗಡಿ ದಾಟಲು ಸಹಕರಿಸಿದರು.

ಉಳಿದಂತೆ ನಾಯಕಿ ನಿಧಾ ಧರ್‌ 8(11), ಆಲಿಯಾ ರಿಯಾಜ್‌ 6(11), ಜಾವೇದ್‌ ಡಕ್‌ಔಟ್‌, ಆರೂಬ್‌ ಶಾ 2(3), ಸಾದಿಯಾ ಇಕ್ಬಾಲ್‌ ಹಾಗೂ ನಶ್ರಾ ಸಂಧು ಡಕ್‌ಔಟ್‌ ಆಗಿ ಹೊರನಡೆದರು.

ಟೀಂ ಇಂಡಿಯಾ ಪರ ದೀಪ್ತಿ ಶರ್ಮಾ ಪ್ರಮುಖ ಮೂರು ವಿಕೆಟ್‌ ಕಬಳಿಸಿ ಮಿಂಚಿದರು. ರೇಣುಕಾ ಸಿಂಗ್‌, ಪೂಜಾ ಹಾಗೂ ಕನ್ನಡತಿ ಶ್ರೇಯಾಂಕಾ ಪಾಟೀಲ್‌ ತಲಾ 2 ವಿಕೆಟ್‌ ಕಬಳಿಸಿ ಗಮನ ಸೆಳೆದರು.

ಟೀಂ ಇಂಡಿಯಾ ಇನ್ನಿಂಗ್ಸ್‌: ಈ ಸಾಧಾರಣ ಮೊತ್ತ ಬೆನ್ನತ್ತಿದ ಭಾರತ ತಂಡಕ್ಕೆ ಉತ್ತಮ ಆರಂಭ ದೊರೆಯಿತು. ಶಫಾಲಿ ವರ್ಮಾ 40(29) ರನ್‌ ಹಾಗೂ ಸ್ಮೃತಿ ಮಂದನ್ನಾ 45(31) ರನ್‌ ಗಳಿಸಿ ಉತ್ತಮ ಆರಂಭ ಒದಗಿಸಿಕೊಟ್ಟರು. ಬಳಿಕ ಬಂದ ಹೇಮಲತಾ 14(11) ರನ್‌ ಗಳಿಸಿ ಔಟಾದರು.

ಕೊನೆಯಲ್ಲಿ ಒಂದಾದ ನಾಯಕ ಹರ್ಮನ್‌ಪ್ರೀತ್‌ ಕೌರ್‌ 5(11) ಮತ್ತು ರೋಡ್ರಿಗಸ್‌ 3(3) ರನ್‌ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಪಾಕಿಸ್ತಾನ ಪರ ಆರೂಬ್‌ ಶಾ ಎರಡು ಹಾಗೂ ನಶ್ರಾ ಸಂಧು ಒಂದು ವಿಕೆಟ್‌ ಕಬಳಿಸಿದರು.

ಪಂದ್ಯಶ್ರೇಷ್ಠ: ದೀಪ್ತಿ ಶರ್ಮಾ

Tags:
error: Content is protected !!