Mysore
25
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

T20 worldcup: ಟಿ20 ವಿಶ್ವಕಪ್‌ ಟೂರ್ನಿಗಾಗಿ ಅಮೇರಿಕಾಕ್ಕೆ ಹಾರಿದ ಡಿಕೆ: ಪ್ಲೇಯರ್‌ ಆಗಿ ಅಲ್ಲ!

ನವದೆಹಲಿ: ಮುಂಬರುವ ಟಿ20 ವಿಶ್ವಕಪ್‌ಗೆ ಈಗಾಗಲೇ ಎಲ್ಲಾ ಸಿದ್ದತೆಗಳು ನಡೆದಿದ್ದು, ಐಸಿಸಿ‌ (ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕೌನ್ಸಿಲ್) ಈಗ ಮತ್ತೊಂದು ಅಪ್‌ಡೇಟ್‌ ನೀಡಿದೆ.

ಈ ಬಾರಿಯ ವಿಶ್ವಕಪ್‌ನಲ್ಲಿ ವೀಕ್ಷಕ ವಿವರಣೆಗಾರರಾಗಿ ನೇಮಕಗೊಂಡಿರುವ ಅನುಭವಿ ಕಾಮೆಂಟೇಟರ್ಸ್‌ ಹಾಗೂ ಮಾಜಿ ಕ್ರಿಕೆಟಿಗರ ಪಟ್ಟಿಯನ್ನು ಐಸಿಸಿ ತನ್ನ ಅಧಿಕೃತ ಖಾತೆಯಲ್ಲಿಂದು ಬಿಡುಗಡೆ ಮಾಡಿದೆ.

ಒಟ್ಟು 40 ಅನುಭಿವಗಳು ಕಾಮೆಂಟರಿ ಪ್ಯಾನಲ್‌ ಹಂಚಿಕೊಳ್ಳಲಿದ್ದಾರೆ. ಇದರಲ್ಲಿ ಟೀಂ ಇಂಡಿಯಾದ ನಾಲ್ವರು ಮಾಜಿ ಆಟಗಾರರು ಸ್ಥಾನ ಪಡೆದಿರುವುದು ವಿಶೇಷ. ಅದರಲ್ಲೂ ಈಗಷ್ಟೇ ಟಿ20 ಕ್ರಿಕೆಟ್‌ ಹಾಗೂ ಐಪಿಎಲ್‌ನಿಂದ ವಿದಾಯ ಹೇಳಿರುವ ಡಿಕೆ ಅಲಿಯಾಸ್‌ ದಿನೇಶ್‌ ಕಾರ್ತಿಕ್‌ ಅವರು ಸಹಾ ಈ ಪ್ಯಾನಲ್‌ ಬಾಕ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

https://x.com/ICC/status/1793945360215232697

ಹೌದು ಈಗಷ್ಟೇ ಆರ್‌ಸಿಬಿ ಪರ ಉತ್ತಮ ಪ್ರದರ್ಶನ ನೀಡಿ, ಆರ್‌ಸಿಬಿ ಜತೆಗೆ ತಮ್ಮ ಅಭಿಯಾನವನ್ನು ಮುಗಿಸಿ ದಿನೇಶ್‌ ಕಾರ್ತಿಕ್‌ ಅವರನ್ನು ಮತ್ತೆ ಕಾಮೆಂಟರಿ ಪ್ಯಾನೆಲ್‌ಗೆ ಆಯ್ಕೆ ಮಾಡಲಾಗಿದೆ. ಇವರನ್ನು ಸೇರಿದಂತೆ ಒಟ್ಟು ನಾಲ್ವರು ಭಾರತೀಯರನ್ನು ಈ ಬಾರಿ ವೀಕ್ಷಕ ವಿವರಣೆಗಾಗಿ ನೇಮಿಸಿದ್ದು, ಮಾಜಿ ಟೀಂ ಇಂಡಿಯಾ ಕೋಚ್‌ ರವಿ ಶಾಸ್ರ್ತಿ, ಸುನೀಲ್‌ ಗವಾಸ್ಕರ್‌, ಹರ್ಷಾ ಭೋಗ್ಲೆ ಮತ್ತು ದಿನೇಶ್‌ ಕಾರ್ತಿಕ್‌ ಅವರಿಗೆ ಸ್ಥಾನ ಲಭಿಸಿದೆ. ಆದರೆ ಟೀಂ ಇಂಡಿಯಾದ ಬ್ಯಾಟರ್‌ ವಿರೇಂದ್ರ ಸೆಹ್ವಾಗ್‌ ಗೆ ಇಲ್ಲಿ ಸ್ಥಾನ ನೀಡಲಾಗಿಲ್ಲ.

ಉಳಿದಂತೆ ರಿಕ್ಕಿ ಪಾಂಟಿಂಗ್‌, ಇಯಾನ್‌ ಬಿಷಪ್‌, ನಾಸಿರ್‌ ಹುಸೇನ್‌, ಗ್ರೇಮ್‌ ಸ್ಮಿತ್‌, ಸ್ಟೀವ್‌ ಸ್ಮಿತ್‌ ಅಮೇರಿಕನ್‌ ಕಾಮೆಂಟೇಟರ್‌ ಜೇಮ್ಸ್‌ ಓʼಬ್ರೇನ್‌, ವರ್ಲ್ಡ್‌ಕಪ್‌ ವಿನ್ನರ್‌ ಇಯಾನ್‌ ಮಾರ್ಗನ್‌, ವಾಸಿ ಅಕ್ರಂ ಸೇರಿದಂತೆ ಹಲವು ಲೆಜೆಂಟ್‌ ಕ್ರಿಕೆಟರ್ಸ್‌ ಈ ಟೂರ್ನಿಯಲ್ಲಿ ಕಾಮೆಂಟೇಟರ್‌ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.

Tags: