Mysore
22
haze

Social Media

ಸೋಮವಾರ, 22 ಡಿಸೆಂಬರ್ 2025
Light
Dark

t20 worldcup 2024: ಪಾಕ್‌ ಬಗ್ಗುಬಡಿದು ಪಾಕಿಸ್ತಾನ ದಾಖಲಿಸಿದ್ದ ರೆಕಾರ್ಡನ್ನೆ ಮುರಿದ ಟೀಂ ಇಂಡಿಯಾ

ನ್ಯೂಯಾರ್ಕ್:‌ ಟೀಂ ಇಂಡಿಯಾದ ಸಂಘಟಿತಾ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ದಾಳಿಗೆ ತುತ್ತಾದ ಪಾಕಿಸ್ತಾನ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಎದುರು ಹೀನಾಯ ಸೋಲು ಕಂಡಿದೆ. ಆ ಮೂಲಕ ಪಾಕಿಸ್ತಾನ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಸತತ ಎರಡನೇ ಪಂದ್ಯ ಸೋಲುವ ಮೂಲಕ ಬಹುತೇಕ ಟೂರ್ನಿಯಿಂದ ಹೊರಬಿದ್ದಂತೆ ಆಗಿದೆ.

ಇಲ್ಲಿನ ನಸ್ಸೌ ಕೌಂಟಿ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಟಿ20 ವಿಶ್ವಕಪ್‌ ಟೂರ್ನಿಯ ಗ್ರೂಪ್‌ ಹಂತದ 19ನೇ ಪಂದ್ಯದಲ್ಲಿ ಭಾರತ 19 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 119 ರನ್‌ ಗಳಿಸಿ ಪಾಕ್‌ಗೆ 120 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 113 ರನ್‌ ಕಲೆಹಾಕುವ ಮೂಲಕ 6 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತು.

ಇನ್ನು ಈ ಟಿ20 ವಿಶ್ವಕಪ್‌ನಲ್ಲಿ ಭಾರತ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಪಾಕಿಸ್ತಾನ ನಿರ್ಮಿಸಿದ್ದ ತನ್ನದೇ ವಿಶ್ವ ದಾಖಲೆಯನ್ನು ಭಾರತ ಸರಿಗಟ್ಟಿತು.

ಬದ್ಧ ವೈರಿಗಳ ಕಾದಾಟಗಳಲ್ಲಿ ಅತೀ ಕಡಿಮೆ ಮೊತ್ತವನ್ನು (120) ಟಿ20 ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾ ಡಿಫೆಂಡ್‌ ಮಾಡುವ ಮೂಲಕ ನೂತನ ವಿಶ್ವ ದಾಖಲೆಯನ್ನು ಬರೆದಿದೆ.

ಅಂದರೆ ಟಿ20 ವಿಶ್ವಕಪ್‌ ನಲ್ಲಿ ತಂಡವೊಂದರ ಮೇಲೆ ಅತಿಹೆಚ್ಚು ಪಂದ್ಯಗಳನ್ನು ಗೆದ್ದ ತಂಡ ಎಂಬ ಹೆಗ್ಗಳಿಕೆ ಭಾರತ ಪಾತ್ರವಾಗಿದೆ. ಈ ಹಿಂದೆ ಈ ದಾಖಲೆ ಪಾಕಿಸ್ತಾನದ ಹೆಸರಿನಲ್ಲಿತ್ತು. ಪಾಕಿಸ್ತಾನ ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ 6 ಗೆಲುವನ್ನು ದಾಖಲಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿತ್ತು. ಇದೀಗ ಪಾಕಿಸ್ತಾನ ವಿರುದ್ಧ 7 ಪಂದ್ಯಗಳನ್ನು ಗೆಲ್ಲುವ ಮೂಲಕ ಪಾಕ್‌ ರಚಿಸಿದ್ದ ದಾಖಲೆಯನ್ನು ಭಾರತ ಪುಡಿಗಟ್ಟುವ ಮೂಲಕ ನೂತನ ವಿಶ್ವ ದಾಖಲೆಯನ್ನು ತಮ್ಮದಾಗಿಸಿಕೊಂಡಿತು.

Tags:
error: Content is protected !!