Mysore
20
overcast clouds
Light
Dark

T20 WorldCup 2024: ಇಂಗ್ಲೆಂಡ್‌ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟ ಭಾರತ

ಗಯಾನಾ: ಇಲ್ಲಿನ ಪ್ರಾವಿಡೆನ್ಸ್‌ ಸ್ಟೇಡಿಯಂನಲ್ಲಿ ನಡೆದ 2024ರ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಇಂಗ್ಲೆಂಡ್‌ ವಿರುದ್ಧ 68 ರನ್‌ಗಳ ಗೆಲುವನ್ನು ದಾಖಲಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿದೆ.

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ರೋಹಿತ್‌ ಶರ್ಮಾ ಅರ್ಧಶತಕ, ಸೂರ್ಯಕುಮಾರ್‌ ಯಾದವ್‌ ಮತ್ತು ಹಾರ್ದಿಕ್‌ ಪಾಂಡ್ಯ ಉತ್ತಮ ಬ್ಯಾಟಿಂಗ್‌ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 171 ರನ್‌ ಕಲೆಹಕಿ ಎದುರಾಳಿ ಇಂಗ್ಲೆಂಡ್‌ಗೆ 172 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಇಂಗ್ಲೆಂಡ್‌ 16.4 ಓವರ್‌ಗಳಲ್ಲಿ 103 ರನ್‌ಗಳಿಗೆ ಆಲ್‌ಔಟ್‌ ಆಗಿದೆ.

ಭಾರತದ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ನಾಯಕ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಕಣಕ್ಕಿಳಿದರು. ವಿರಾಟ್‌ ಕೊಹ್ಲಿ 9 ರನ್‌ಗಳಿಗೆ ಔಟ್‌ ಆದರೆ, ರೋಹಿತ್‌ ಶರ್ಮಾ 57 (39) ರನ್‌ ಗಳಿಸಿ ಜವಾಬ್ದಾರಿಯುತ ಆಟವನ್ನಾಡಿದರು. ರಿಷಬ್‌ ಪಂತ್‌ 4 ರನ್‌ ಕಲೆಹಾಕಿದರೆ, ಸೂರ್ಯಕುಮಾರ್‌ ಯಾದವ್‌ 47 (36) ರನ್‌ ಗಳಿಸಿ ಉತ್ತಮ ಪ್ರದರ್ಶನ ನೀಡಿದರು. ಹಾರ್ದಿಕ್‌ ಪಾಂಡ್ಯ 23 (13) ರನ್‌, ರವೀಂದ್ರ ಜಡೇಜಾ ಅಜೇಯ 17, ಶಿವಮ್‌ ದುಬೆ ಡಕ್‌ಔಟ್‌, ಅಕ್ಷರ್‌ ಪಟೇಲ್‌ 10 ಮತ್ತು ಅರ್ಷ್‌ದೀಪ್‌ ಸಿಂಗ್‌ ಅಜೇಯ 1 ರನ್‌ ಗಳಿಸಿದರು.

ಇಂಗ್ಲೆಂಡ್‌ ಪರ ಕ್ರಿಸ್‌ ಜೋರ್ಡನ್‌ 3 ವಿಕೆಟ್, ಆದಿಲ್‌ ರಶೀದ್‌, ಸ್ಯಾಮ್‌ ಕರನ್‌, ಜೋಫ್ರಾ ಆರ್ಚರ್‌ ಮತ್ತು ರೀಸ್‌ ಟಾಪ್ಲಿ ತಲಾ ಒಂದೊಂದು ವಿಕೆಟ್‌ ಪಡೆದರು.

ಇಂಗ್ಲೆಂಡ್‌ ಇನ್ನಿಂಗ್ಸ್:‌ ಭಾರತ ನೀಡಿದ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಇಂಗ್ಲೆಂಡ್‌ ಪರ ಆರಂಭಿಕರಾಗಿ ಕಣಕ್ಕಿಳಿದ ಫಿಲಿಫ್‌ ಸಾಲ್ಟ್‌ 5 ರನ್‌ ಹಾಗೂ ಜೋಸ್‌ ಬಟ್ಲರ್‌ 23 ರನ್‌ ಗಳಿಸಿದರು. ಇನ್ನುಳಿದಂತೆ ಮೊಯಿನ್‌ ಅಲಿ 8, ಜಾನಿ ಬೈರ್‌ಸ್ಟೋ ಡಕ್‌ಔಟ್‌, ಹ್ಯಾರಿ ಬ್ರೂಕ್‌ 25, ಸ್ಯಾಮ್‌ ಕರನ್‌ 2, ಲಿಯಾಮ್‌ ಲಿವಿಂಗ್‌ಸ್ಟನ್‌ 11, ಕ್ರಿಸ್‌ ಜೋರ್ಡನ್‌ 1, ಜೋಫ್ರಾ ಆರ್ಚರ್‌ 21, ಆದಿಲ್‌ ರಶೀದ್‌ 2 ಮತ್ತು ರೀಸ್‌ ಟಾಪ್ಲಿ ಅಜೇಯ 3 ರನ್‌ ಗಳಿಸಿದರು.

ಭಾರತದ ಪರ ಅಕ್ಷರ್‌ ಪಟೇಲ್ ಹಾಗೂ ಕುಲ್‌ದೀಪ್‌ ಯಾದವ್‌ ತಲಾ 3 ವಿಕೆಟ್‌ ಪಡೆದರೆ, ಜಸ್‌ಪ್ರೀತ್‌ ಬುಮ್ರಾ 2 ವಿಕೆಟ್‌ ಪಡೆದರು.